ಬ್ಯೂಟಿ ಪಾರ್ಲರ್‌ಗೆ ಹೋಗುವವರಿಗೆ ಎಚ್ಚರಿಕೆ: ಹೇರ್ ಸ್ಟೈಲ್ ಎಡವಟ್ಟು ‘ಬ್ರೈನ್ ಸ್ಟ್ರೋಕ್’ಗೆ ಕಾರಣವಾಗಬಹುದು!

Date:

spot_img

ಇಂದು ಸಿನಿಮಾ ನಟರಂತೆ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದು ಅಥವಾ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಅದು ನಿಮ್ಮ ಪ್ರಾಣಕ್ಕೆ ಅಪಾಯ ತರಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಹೇರ್‌ವಾಶ್ ಮಾಡುವಾಗ ಕುತ್ತಿಗೆಯನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ, ಅದು ‘ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್’ಗೆ ಕಾರಣವಾಗಬಹುದು.

ಏನಿದು ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್?

ಕೇಶವಿನ್ಯಾಸದ ಸಮಯದಲ್ಲಿ, ಕೂದಲು ತೊಳೆಯಲು ಕುತ್ತಿಗೆಯನ್ನು ಸಿಂಕ್‌ನಲ್ಲಿ ಹಿಮ್ಮುಖವಾಗಿ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕುತ್ತಿಗೆಯನ್ನು ಅಸಹಜ ಕೋನದಲ್ಲಿ ಇಟ್ಟುಕೊಂಡರೆ, ಮೆದುಳಿಗೆ ರಕ್ತ ಪೂರೈಸುವ ಪ್ರಮುಖ ರಕ್ತನಾಳಗಳಿಗೆ ಹಾನಿಯಾಗಬಹುದು. ಇದರಿಂದ ರಕ್ತದ ಹರಿವಿಗೆ ಅಡಚಣೆಯಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದು ಮೆದುಳಿನಲ್ಲಿರುವ ರಕ್ತನಾಳವು ಸಿಡಿಯಲು ಕಾರಣವಾಗಬಹುದು, ಇದರಿಂದಾಗಿ ಆಮ್ಲಜನಕ, ಗ್ಲೂಕೋಸ್ ಮತ್ತು ಪೋಷಕಾಂಶಗಳ ಪೂರೈಕೆ ಕಡಿಮೆಯಾಗಿ ಮೆದುಳಿನ ಕೋಶಗಳು ಹಾನಿಗೊಳಗಾಗಬಹುದು. ಇದನ್ನೇ ಪಾರ್ಶ್ವವಾಯು (Stroke) ಅಥವಾ ‘ಸಲೂನ್ ಸ್ಟ್ರೋಕ್’ ಎಂದು ಕರೆಯಲಾಗುತ್ತದೆ.

ಈ ಸ್ಥಿತಿ ತೀರಾ ವಿರಳವಾಗಿದ್ದರೂ, ತಜ್ಞರು ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ. ಕೂದಲನ್ನು ತೊಳೆಯುವಾಗ ನಿಮಗೆ ಕುತ್ತಿಗೆಯಲ್ಲಿ ಯಾವುದೇ ರೀತಿಯ ನೋವು ಅಥವಾ ಅಸಹಜ ಅನುಭವವಾದರೆ, ಕೂಡಲೇ ನಿಮ್ಮ ಕುತ್ತಿಗೆಯನ್ನು ಸರಿಪಡಿಸಿಕೊಳ್ಳಬೇಕು.

ಎಚ್ಚರಿಕೆ ಮತ್ತು ಜಾಗರೂಕತೆ ಇರಲಿ

ಹೇರ್‌ವಾಶ್ ಮಾಡಿಸಿಕೊಳ್ಳುವಾಗ ಮೈಗೆ ವಿಶ್ರಾಂತಿ ಸಿಕ್ಕಂತೆ ಅನಿಸಬಹುದು, ಆದರೆ ಸ್ವಲ್ಪ ಯಾಮಾರಿದರೆ ಇದೇ ಜೀವಕ್ಕೆ ಅಪಾಯ ತರುತ್ತದೆ. ಕೇಶವಿನ್ಯಾಸಕರು ಬಳಸುವ ಉತ್ಪನ್ನಗಳೂ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದುದರಿಂದ, ಸಲೂನ್‌ಗಳಿಗೆ ಹೋದಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯಕ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಗೃಹಜ್ಯೋತಿ ಪರಿಶೀಲನೆ: ಗ್ರಾಪಂನಲ್ಲೇ ಪ್ರಕ್ರಿಯೆ ನಡೆಸಲು ಆದೇಶ

ಕಾರ್ಕಳದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಇನ್ಮುಂದೆ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಲಂಚ ಕೇಳಿದರೆ ಅಮಾನತು ಎಚ್ಚರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಿಕ್ಕಿಂ ಸುರಂಗ ಕುಸಿತ ದುರಂತ: 8 ಸಾವು, 18 ಕಾರ್ಮಿಕರು ಸಿಲುಕಿರುವ ಶಂಕೆ

ಸಿಕ್ಕಿಂನ ನಾಮ್ಚಿ ಬಳಿ ಜಲವಿದ್ಯುತ್ ಸುರಂಗ ಕುಸಿದು 8 ಮಂದಿ ಸಾವು. ಮೀಥೇನ್ ಅನಿಲ ಸೋರಿಕೆಯಿಂದ ಕಾರ್ಯಾಚರಣೆಗೆ ಅಡ್ಡಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ