
ಆರೋಗ್ಯಕ್ಕೆ ತರಕಾರಿಗಳನ್ನು ಸೇವಿಸುವುದು ಉತ್ತಮ. ಆದರೆ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಹಾನಿಕರವಾಗಬಹುದು. ಕೆಲವು ತರಕಾರಿಗಳನ್ನು ಅತಿಯಾಗಿ ಬೇಯಿಸುವುದರಿಂದ ಪೋಷಕಾಂಶಗಳು ಕಡಿಮೆಯಾದರೂ, ಕೆಲವವನ್ನು ಸರಿಯಾಗಿ ಬೇಯಿಸದೆ ಸೇವಿಸುವುದು ಅಪಾಯಕಾರಿ. ಟೊಮೆಟೊ, ಕ್ಯಾರೆಟ್, ಈರುಳ್ಳಿ, ಸೌತೆಕಾಯಿಯಂತಹ ತರಕಾರಿಗಳನ್ನು ಹಸಿಯಾಗಿ ತಿನ್ನಬಹುದು, ಆದರೆ ಈ ಕೆಳಗಿನ ತರಕಾರಿಗಳನ್ನು ಮಾತ್ರ ಹಸಿಯಾಗಿ ತಿನ್ನಬೇಡಿ.
1. ಬದನೆಕಾಯಿ (Eggplant) ಬದನೆಕಾಯಿಯನ್ನು ಯಾವಾಗಲೂ ಚೆನ್ನಾಗಿ ಬೇಯಿಸಿ ತಿನ್ನಬೇಕು. ಬದನೆಕಾಯಿಯ ಬೀಜಗಳಲ್ಲಿ ಲಾಡಿಹುಳು (Tapeworm) ಮೊಟ್ಟೆಗಳಿರಬಹುದು. ಇದನ್ನು ಬೇಯಿಸಿದಾಗ ಮಾತ್ರ ಆ ಮೊಟ್ಟೆಗಳು ನಾಶವಾಗುತ್ತವೆ.
2. ಎಲೆಕೋಸು (Cabbage) ಎಲೆಕೋಸನ್ನು ಹಸಿಯಾಗಿ ತಿನ್ನುವುದು ತುಂಬಾ ಅಪಾಯಕಾರಿ. ಏಕೆಂದರೆ ಇದರಲ್ಲಿ ಅತಿ ಹೆಚ್ಚು ಲಾಡಿಹುಳುಗಳು ಮತ್ತು ಅವುಗಳ ಮೊಟ್ಟೆಗಳು ಇರುತ್ತವೆ. ಇದರ ಜೊತೆಗೆ ಕ್ರಿಮಿ-ಕೀಟಗಳೂ ಇರಬಹುದು. ಎಲೆಕೋಸನ್ನು ತಿನ್ನುವ ಮುನ್ನ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಬಳಿಕ ಅದನ್ನು ಬಳಸಬೇಕು.
3. ಸೊಪ್ಪಿನ ತರಕಾರಿಗಳು (Greens) ಕೆಸುವಿನ ಎಲೆ, ಪಾಲಕ್ ಮತ್ತು ಬಸಳೆ ಸೊಪ್ಪನ್ನು ಹಸಿಯಾಗಿ ತಿನ್ನಬಾರದು. ಅವುಗಳನ್ನು ಉಪಯೋಗಿಸುವ ಮುನ್ನ ಬಿಸಿನೀರಿನಲ್ಲಿ ಬೇಯಿಸಿ ಬಳಸಬೇಕು. ಇದರಿಂದ ಅವುಗಳಲ್ಲಿರುವ ಅಂತಹ ಹಾನಿಕಾರಕ ಅಂಶಗಳು ನಾಶವಾಗುತ್ತವೆ.
4. ದೊಣ್ಣೆ ಮೆಣಸಿನಕಾಯಿ (Capsicum) ಕ್ಯಾಪ್ಸಿಕಂ ಅಥವಾ ದೊಣ್ಣೆ ಮೆಣಸಿನಕಾಯಿಯನ್ನು ಬಳಸುವ ಮೊದಲು ಅದರ ಕಿರೀಟ ಭಾಗವನ್ನು ತೆರೆದು ಬೀಜಗಳನ್ನು ತೆಗೆಯಬೇಕು. ನಂತರ ಅದನ್ನು ಬಿಸಿನೀರಿನಲ್ಲಿ ಮುಳುಗಿಸುವುದು ಉತ್ತಮ. ಏಕೆಂದರೆ ಕ್ಯಾಪ್ಸಿಕಂ ಬೀಜಗಳಲ್ಲಿ ಲಾಡಿಹುಳುವಿನ ಮೊಟ್ಟೆಗಳಿರುವ ಸಾಧ್ಯತೆ ಇದೆ.
ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ, ತರಕಾರಿಗಳಿಂದ ಗರಿಷ್ಠ ಪ್ರಯೋಜನ ಪಡೆಯುವ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು.