spot_img

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳು ಮತ್ತು ಮಾಧ್ಯಮದವರ ಮೇಲೆ ಹಲ್ಲೆ,ಲಘು ಲಾಠಿ ಪ್ರಹಾರ; ಎಸ್ಪಿ ಅರುಣ್ ಕುಮಾರ್ ಪ್ರತಿಕ್ರಿಯೆ

Date:

spot_img

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅನಾಮಿಕ ದೂರಿನ ಮೇರೆಗೆ ಶವಗಳ ಶೋಧ ನಡೆಸುತ್ತಿದ್ದ ಎಸ್ಐಟಿ ತಂಡ ಕಾರ್ಯಾಚರಣೆ ಮುಗಿಸಿ ಹಿಂದಿರುಗಿದ ಬಳಿಕ, ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಮತ್ತು ಯೂಟ್ಯೂಬರ್‌ಗಳ ನಡುವೆ ಘರ್ಷಣೆ ನಡೆದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಬಳಿಕ ಪ್ರತ್ಯೇಕ ಘಟನೆಯಲ್ಲಿ ಖಾಸಗಿ ಸುದ್ದಿವಾಹಿನಿ ಸಿಬ್ಬಂದಿಯ ಮೇಲೂ ಹಲ್ಲೆ ನಡೆದಿದೆ.

ಘಟನೆಯ ವಿವರ

ಎಸ್ಐಟಿ ತಂಡವು ದಿನದ ಕಾರ್ಯಚರಣೆ ಮುಗಿಸಿ ತೆರಳಿದ ಬಳಿಕ, ಸೌಜನ್ಯಾ ಪ್ರಕರಣದ ಹಿನ್ನೆಲೆಯಲ್ಲಿ ಕೆಲವು ಯೂಟ್ಯೂಬರ್‌ಗಳು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರೆನ್ನಲಾದ ಗುಂಪೊಂದು, ಕ್ಷೇತ್ರದ ವಿರುದ್ಧ ಸುಳ್ಳು ಸುದ್ದಿ ಹರಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಇದು ಮಾತಿನ ಚಕಮಕಿಗೆ ತಿರುಗಿ, ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಘಟನೆಯಲ್ಲಿ ಸ್ಥಳದಲ್ಲಿದ್ದ ಒಂದು ಕಾರು ಮತ್ತು ಜೀಪ್ ಜಖಂಗೊಂಡಿವೆ. ಗಾಯಗೊಂಡ ಯೂಟ್ಯೂಬರ್‌ಗಳನ್ನು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಧ್ಯಮದವರ ಮೇಲೆ ದಾಳಿ

ಮೊದಲ ಘಟನೆಯನ್ನು ವರದಿ ಮಾಡಲು ಉಜಿರೆ ಆಸ್ಪತ್ರೆಗೆ ತೆರಳಿದ್ದ ಖಾಸಗಿ ಸುದ್ದಿವಾಹಿನಿ ವರದಿಗಾರನ ಮೇಲೆ ಯೂಟ್ಯೂಬರ್‌ಗಳ ಪರವಾಗಿದ್ದ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಎರಡು ಪ್ರತ್ಯೇಕ ಹಲ್ಲೆಗಳ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಠಾಣೆ ಎದುರು ಪ್ರತಿಭಟನೆ

ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿ ಸ್ಥಳೀಯರ ನೂರಾರು ಮಂದಿ ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಯೂಟ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಬಳಿಕ ಅಡಿಶನಲ್ ಎಸ್ಪಿ ರಾಜೇಂದ್ರ ಅವರು ಪ್ರತಿಭಟನಾನಿರತರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಐಜಿಪಿ ಅಮಿತ್ ಸಿಂಗ್ ಮತ್ತು ಎಸ್ಪಿ ಅರುಣ್ ಕುಮಾರ್ ಪರಿಸ್ಥಿತಿಯನ್ನು ಪರಿಶೀಲಿಸಿ ಬಿಗಿ ಬಂದೋಬಸ್ತ್‌ಗೆ ಸೂಚಿಸಿದರು.

ಎಸ್ಪಿ ಅರುಣ್ ಕುಮಾರ್ ಹೇಳಿಕೆ

ಸಂಭವಿಸಿದ ಘಟನೆಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ ಅರುಣ್ ಕುಮಾರ್, “ಎರಡು ತಂಡಗಳಿಂದ ದೂರು ಬಂದಿದೆ. ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರೂ, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಲಾಠಿ ಚಾರ್ಜ್ ಅನಿವಾರ್ಯವಾಗಿತ್ತು” ಎಂದರು. ಅಲ್ಲದೆ, ಎಸ್ಐಟಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮಕ್ಕಾಗಿ ಕಿರಿಕ್ ಕೀರ್ತಿ ದೂರು ನೀಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಸಾದ್ ಯೋಜನೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು ಸೇರಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಂಸದ ರಾಘವೇಂದ್ರ ಮನವಿ

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ಶಿವಮೊಗ್ಗ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ಎರ್ಲಪಾಡಿ ಶಾಲೆಯ ಪ್ರಥ್ವಿಗೆ ಚಿನ್ನದ ಪದಕ!

ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ಆಗಸ್ಟ್ 3ರಂದು ನಡೆದ 3ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎರ್ಲಪಾಡಿ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪ್ರಥ್ವಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಬಂಟರ ಸೇವಾ ಸಂಘ (ರಿ) ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು ಇವರ ನೇತೃತ್ವದಲ್ಲಿ ದಿನಾಂಕ 08.08.2025 ರಂದು ನಡೆಯಲಿರುವ 10 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

ಬಂಟರ ಸೇವಾ ಸಂಘ (ರಿ), ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇದರ ನೇತೃತ್ವದಲ್ಲಿ 10ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ದಿನಾಂಕ 08-08-2025 ಶುಕ್ರವಾರದಂದು ಶ್ರೀ ದೇವಿ ಕೃಪಾ ಸಭಾಭವನದಲ್ಲಿ ವೈಭವದಿಂದ ನಡೆಯಲಿದೆ.

ಪ್ರಾಕೃತಿಕ ವಿಕೋಪ ಪರಿಹಾರ ಬಿಡುಗಡೆಗೆ ಶಾಸಕ ವಿ. ಸುನಿಲ್ ಕುಮಾರ್ ಸಿ.ಎಂ ಗೆ ಪತ್ರ

ಕಾರ್ಕಳ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿಗೆ ತುರ್ತು ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.