ಸಾರಿಗೆ ನೌಕರರ ಮೇಲೆ ಸರ್ಕಾರಕ್ಕೆ ಕರುಣೆಯೇ ಇಲ್ಲ: ಸಿ.ಟಿ.ರವಿ ಕಿಡಿ!

Date:

spot_img
c t ravi11

ಬೆಂಗಳೂರು: ರಾಜ್ಯದ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾರಿಗೆ ನೌಕರರ ವೇತನ ಬಾಕಿ ನೀಡಲು ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಅವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ತೀವ್ರವಾಗಿ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಣೇಶೋತ್ಸವದಲ್ಲಿ ಕಲ್ಲು ತೂರಾಟ, ಹುಬ್ಬಳ್ಳಿ ಪೊಲೀಸ್‌ ಠಾಣೆ ದಾಳಿ, ಡಿಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣಗಳ ಆರೋಪಿಗಳನ್ನು ಕ್ಷಮಿಸುತ್ತೀರಿ. ಆದರೆ, ಸಾರಿಗೆ ನೌಕರರಿಗೆ ಮಾತ್ರ ಎಸ್‌ಎಂಎ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡುತ್ತೀರಿ. ನಿಮ್ಮ ರಾಜಕೀಯ ಕೇವಲ ವೋಟ್ ಬ್ಯಾಂಕ್ ಆಧಾರಿತ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆ

ನೌಕರರ ಬಗ್ಗೆ ಸರ್ಕಾರಕ್ಕೆ ಕರುಣೆಯೇ ಇಲ್ಲ ಎಂದು ಸಿ.ಟಿ. ರವಿ ಆಪಾದಿಸಿದರು. “ಮುಖ್ಯಮಂತ್ರಿಗಳ ಕಾಫಿ-ಟೀಗೆ ದಿನಕ್ಕೆ 11 ಲಕ್ಷ ರೂ. ಖರ್ಚು ಮಾಡುತ್ತೀರಿ. ಹೆಲಿಕಾಪ್ಟರ್ ಪ್ರಯಾಣ ಕಡಿಮೆ ಮಾಡಿಲ್ಲ. ಸಾಧನಾ ಸಮಾವೇಶಕ್ಕೆ ಜನರಿಗೆ ಹಣ ಕೊಟ್ಟು ಕೋಟಿಗಟ್ಟಲೆ ಖರ್ಚು ಮಾಡಿದ್ದೀರಿ. ಆದರೆ ನೌಕರರಿಗೆ ಮಾತ್ರ ಸಂಯಮದ ಪಾಠ ಮಾಡುತ್ತೀರಿ. 38 ತಿಂಗಳ ವೇತನ ಬಾಕಿಯಲ್ಲಿ 26 ತಿಂಗಳಿಂದ ನೀವೇ ಅಧಿಕಾರದಲ್ಲಿದ್ದೀರಿ. ಹಾಗಾದರೆ ನಿಮ್ಮ ಬದ್ಧತೆ ಏನು?” ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಸಚಿವ ಮಹದೇವಪ್ಪ ವಿರುದ್ಧ ಆಕ್ರೋಶ

ಸಚಿವ ಮಹದೇವಪ್ಪ ಅವರ ಟಿಪ್ಪು ಕುರಿತ ಹೇಳಿಕೆಯನ್ನೂ ಸಿ.ಟಿ. ರವಿ ಖಂಡಿಸಿದರು. “ಕೆಆರ್‌ಎಸ್‌ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಪಾಯ ಹಾಕಿದ್ದಕ್ಕೆ ಯಾವುದೇ ದಾಖಲೆ ಇಲ್ಲ. ಸಚಿವ ಮಹದೇವಪ್ಪ ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ಇಲ್ಲವಾದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು,” ಎಂದು ಒತ್ತಾಯಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಮಾರುಕಟ್ಟೆಗೆ ಕಾಲಿಟ್ಟ ಬೋಟ್‌ನ ಹೊಸ ಪ್ರೀಮಿಯಂ ಹೆಡ್‌ಫೋನ್

ಬೋಟ್ ಕಂಪನಿಯು 80 ಗಂಟೆಗಳ ಬ್ಯಾಟರಿ ಹಾಗೂ 45dB ಹೈಬ್ರಿಡ್ ANC ಬೆಂಬಲಿಸುವ ಪ್ರೀಮಿಯಂ ನಿರ್ವಾಣ ಯುಟೋಪಿಯಾ 2 ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ದಿನ ವಿಶೇಷ – ಆದಾಯ ತೆರಿಗೆ ದಿನ

ಭಾರತದಲ್ಲಿ ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಪ್ರಾಮುಖ್ಯತೆ ಮತ್ತು ITR ಸಲ್ಲಿಕೆಯ ಕುರಿತು ವಿವರ ಇಲ್ಲಿದೆ.

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ