ವಿಟ್ಲ: ಫೋಟೋ-ವೀಡಿಯೋ ಲೀಕ್ ಬೆದರಿಕೆ; ಸೌದಿ ಉದ್ಯೋಗಿಗೆ ₹44.80 ಲಕ್ಷ ವಂಚನೆ

Date:

spot_img
FIR

ವಿಟ್ಲ: ಕೇರಳ ಮೂಲದವರಾಗಿದ್ದು ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ 53 ವರ್ಷದ ಮಹಮ್ಮದ್ ಅಶ್ರಫ್ ತಾವರಕಡನ್ ಎಂಬವರು, ಮದುವೆಯ ಉದ್ದೇಶದಿಂದ 2024ರ ಸೆಪ್ಟೆಂಬರ್‌ನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಆದರೆ, ಮದುವೆಯ ನೆಪದಲ್ಲಿ ಅವರನ್ನು ಕರೆಸಿಕೊಂಡ ಆರೋಪಿಗಳ ಗುಂಪು ಫೋಟೊ ಮತ್ತು ವಿಡಿಯೋಗಳನ್ನು ಲೀಕ್ ಮಾಡುವ ಬೆದರಿಕೆ ಹಾಕಿ ಬರೋಬ್ಬರಿ ₹44.80 ಲಕ್ಷ ವಂಚಿಸಿದೆ.

ವಂಚನೆ ಮತ್ತು ಬೆದರಿಕೆ ಕೃತ್ಯ

ಮಹಮ್ಮದ್ ಅಶ್ರಫ್ ಅವರನ್ನು ಮಂಗಳೂರಿಗೆ ಕರೆಸಿದ ನಂತರ ಬಶೀರ್, ಸಫಿಯಾ ಮತ್ತು ಇತರ ಆರೋಪಿಗಳು, ಹೆಣ್ಣು ನೋಡುವ ನೆಪದಲ್ಲಿ ಅವರ ಫೋಟೋಗಳು ಮತ್ತು ವೀಡಿಯೋಗಳನ್ನು ತೆಗೆದುಕೊಂಡಿದ್ದಾರೆ. ನಂತರ ಈ ವೀಡಿಯೋಗಳನ್ನು ಸಾರ್ವಜನಿಕವಾಗಿ ಲೀಕ್ ಮಾಡುವುದಾಗಿ ಬೆದರಿಸಿ ಹಂತ ಹಂತವಾಗಿ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಿದ್ದಾರೆ.

ಈ ಕುರಿತು ಸಂತ್ರಸ್ತ ಮಹಮ್ಮದ್ ಅಶ್ರಫ್ ತಾವರಕಡನ್ ಅವರು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ, ಬಶೀರ್, ಸಫಿಯಾ ಹಾಗೂ ಇತರರ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರ: 145/2025, ಕಲಂ: 318(4), 308(2), 115(2), 351(2) ರ/ವಿ 3(5) BNS-2023 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಲಕೃಷ್ಣಗೆ ಶೂಟಿಂಗ್ ವೇಳೆ ಅಪಘಾತ: ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ನಟ ಬಾಲಕೃಷ್ಣ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನ ನಾಯಗನ್ ಅಡ್ವಾನ್ಸ್ ಬುಕಿಂಗ್ ದಾಖಲೆ: ವಿಜಯ್ ಚಿತ್ರ ಜುಲೈ 23ಕ್ಕೆ ಬಿಡುಗಡೆ

ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಲಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಂಗಾತಿ ಮೇಲೆ ಆಸಕ್ತಿ ಇಲ್ಲವೆಂದು ಡಿವೋರ್ಸ್ ಸಿಗಲ್ಲ: ಹೈಕೋರ್ಟ್ ಆದೇಶ

ಮದುವೆ ಒಪ್ಪಂದವಲ್ಲ, ಸಂಸ್ಕಾರ. ಹೆಂಡತಿ ಮೇಲೆ ಆಸಕ್ತಿ ಇಲ್ಲವೆಂದು ವಿಚ್ಛೇದನ ಕೇಳಿದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.