
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸೋಮವಾರ ನಡೆದ ಬಿಜೆಪಿ ಹಮ್ಮಿಕೊಂಡಿದ್ದ “ಧರ್ಮಸ್ಥಳ ಚಲೋ” ಧರ್ಮಯಾತ್ರೆ ಬೃಹತ್ ಸಮಾವೇಶವುಯಶಸ್ವಿಯಾಗಿ ಅಂತ್ಯಗೊಂಡ ತಕ್ಷಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೌಜನ್ಯಾ ಕುಟುಂಬವನ್ನು ಭೇಟಿ ಮಾಡಿದರು.

ವಿಜಯೇಂದ್ರ ಅವರು ಸೌಜನ್ಯಾಳ ತಾಯಿ ಕುಸುಮಾವತಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡಿ, ಈ ಕಠಿಣ ಸಂದರ್ಭವನ್ನು ಧೈರ್ಯದಿಂದ ಎದುರಿಸಲು ಮನೋಬಲ ತುಂಬುವ ಪ್ರಯತ್ನ ಮಾಡಿದರು.

ಈ ಭೇಟಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಪ್ರೀತಮ್ ಗೌಡ ಹಾಗೂ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಸೇರಿ ಅನೇಕ ನಾಯಕರು ಹಾಜರಿದ್ದರು. ಸಮಾವೇಶದ ನಂತರ ತಕ್ಷಣ ಸೌಜನ್ಯಾ ಕುಟುಂಬದ ಭೇಟಿಯನ್ನು ಬಿಜೆಪಿ ತನ್ನ ಮಾನವೀಯತೆ ಮತ್ತು ಸಾಂತ್ವನದ ನಿಟ್ಟಿನಲ್ಲಿ ನಡೆಸಲಾಗಿದೆ ಎಂದು ಹೇಳಿದೆ.