
₹14,131 ಕೋಟಿ ಮೌಲ್ಯದ ಆಸ್ತಿ ವಶ, ನನ್ನಿಂದ ದುಪ್ಪಟ್ಟು ಸಾಲ ವಸೂಲಿ ಮಾಡಲಾಗಿದೆ: ವಿಜಯ್ ಮಲ್ಯ ಕಿಡಿ
ಕಿಂಗ್‌ಫಿಷರ್ ಏರ್‌ಲೈನ್ಸ್ ಪ್ರಕರಣದಲ್ಲಿ ಸಾಲದ ಅಸಲು 6,203 ಕೋಟಿ ರೂಪಾಯಿ ಹಾಗೂ ಇದಕ್ಕೆ ಬಡ್ಡಿ 1,200 ಕೋಟಿ ರೂಪಾಯಿ ಆಗಲಿದೆ ಎಂದು ಸಾಲ ವಸೂಲಾತಿ ನ್ಯಾಯಮಂಡಳಿಯೇ ಹೇಳಿದೆ. ಆದರೆ, ಈ ಸಂಬಂಧ ನನ್ನಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದರೂ ನಾನಿನ್ನೂ ಆರ್ಥಿಕ ಅಪರಾಧಿಯಾಗಿದ್ದೇನೆ ಎಂದು ಕೇಂದ್ರ ಸರಕಾರದ ಕ್ರಮವನ್ನು ಉದ್ಯಮಿ ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ