
ಪಾಜಕ : ಗುರುಪೂರ್ಣಿಮಾ ಆಚರಣೆಯ ಪುಣ್ಯದಿನದಂದು ಪಾಜಕ ಕ್ಷೇತ್ರದ ಅರ್ಚಕರು ಹಾಗೂ ಗುರುಗಳಾದ ವೇದಮೂರ್ತಿ ಶ್ರೀ ಮಾಧವ ಉಪಾಧ್ಯಾಯ (ಶ್ರೀಮತಿ ರತ್ನ) ದಂಪತಿಗಳನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ವತಿಯಿಂದ ಪಾಜಕ ಕ್ಷೇತ್ರದ ಶ್ರೀ ಅನಂತಾಸನ ದೇವರ ಸನ್ನಿಧಾನದಲ್ಲಿ ಈ ಸನ್ಮಾನ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ವೇದಮೂರ್ತಿಗಳಾದ ಶ್ರೀ ರಮಣ ಆಚಾರ್ಯ ಹಾಗೂ ಶ್ರೀ ನಂದಳಿಕೆ ವಿಠ್ಠಲ ಭಟ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಗುರುಪೂರ್ಣಿಮೆಯ ಪವಿತ್ರ ದಿನದಂದು ಜ್ಞಾನ ನೀಡುವ ಗುರುಗಳನ್ನು ಗೌರವಿಸುವ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.