ಯುಗಾದಿ, ರಂಜಾನ್ ಹಬ್ಬದ ರಜೆ: ಗಗನಕ್ಕೇರಿದ ಖಾಸಗಿ ಬಸ್ ದರ !

Date:

spot_img

ಬೆಂಗಳೂರು, ಮಾರ್ಚ್ 25: ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ಮೂರು ದಿನಗಳ ರಜೆ ಸಿಕ್ಕಿರುವುದರಿಂದ ಊರಿಗೆ ತೆರಳಲು ಸಜ್ಜಾದವರ ಮೇಲೆ ಖಾಸಗಿ ಬಸ್ ದರ ಏರಿಕೆಯ ಶಾಕ್ ಬಿದ್ದಿದೆ. ಮಾರ್ಚ್ 29 ಯುಗಾದಿ, ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಬಹುತೇಕರು ಊರಿಗೆ ಹೋಗಲು ತಯಾರಿ ನಡೆಸಿದ್ದಾರೆ. ಆದರೆ, ಖಾಸಗಿ ಬಸ್ ಮಾಲೀಕರು ದರವನ್ನು ಶೇ.50-60ರಷ್ಟು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, “ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಸರ್ಕಾರಿ ಪ್ರೋತ್ಸಾಹ ಸಿಗದ ಕಾರಣ, ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ” ಎಂದಿದ್ದಾರೆ.

ಹಬ್ಬದ ಪ್ರಯುಕ್ತ ಬಸ್ ದರ ಎಷ್ಟು ಹೆಚ್ಚಳ?


ಬೆಂಗಳೂರು-ದಾವಣಗೆರೆ: ₹450-1300 ₹750-5500

ಬೆಂಗಳೂರು-ಧಾರವಾಡ: ₹600-1100 ➝ ₹1069-5500

ಬೆಂಗಳೂರು-ಹುಬ್ಬಳ್ಳಿ: ₹475-1100 ₹1200-4200

ಬೆಂಗಳೂರು-ಬೆಳಗಾವಿ: ₹389-1200 ₹1129-5500

ಬೆಂಗಳೂರು-ಮಂಗಳೂರು: ₹650-1300 ₹1200-4500

ಬೆಂಗಳೂರು-ಕಲ್ಬುರ್ಗಿ: ₹750-1000 ₹1200-2200

ಬೆಂಗಳೂರು-ರಾಯಚೂರು: ₹650-990 ₹1100-2990

ಬೆಂಗಳೂರು-ಹಾಸನ: ₹463-1000 ₹750-1600

ಬೆಂಗಳೂರು-ಯಾದಗಿರಿ: ₹699-900 ₹1300-2200

ಬೆಂಗಳೂರು-ಶಿವಮೊಗ್ಗ: ₹500-990 ₹1199-1800

ಹಬ್ಬದ ಪ್ರಯುಕ್ತ ಊರಿನತ್ತ ತೆರಳುವವರಿಗೆ ಈ ಬಾರಿಯ ಬಸ್ ದರ ಏರಿಕೆ ಭಾರೀ ಹೊಡೆತ ನೀಡಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳತ್ತ ತಿರುಗುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾರುತಿ ಕಾರುಗಳ ಬೆಲೆ 30,000 ರೂ. ಏರಿಕೆ: ಆಗಸ್ಟ್ 1 ರಿಂದ ಜಾರಿ

ಆಗಸ್ಟ್ 1 ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಗರಿಷ್ಠ 30,000 ರೂ.ವರೆಗೆ ಏರಿಕೆಯಾಗಲಿದೆ. ಬೆಲೆ ಏರಿಕೆಗೆ ಕಾರಣವೇನು? ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಾಲಕೃಷ್ಣಗೆ ಶೂಟಿಂಗ್ ವೇಳೆ ಅಪಘಾತ: ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ನಟ ಬಾಲಕೃಷ್ಣ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನ ನಾಯಗನ್ ಅಡ್ವಾನ್ಸ್ ಬುಕಿಂಗ್ ದಾಖಲೆ: ವಿಜಯ್ ಚಿತ್ರ ಜುಲೈ 23ಕ್ಕೆ ಬಿಡುಗಡೆ

ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಲಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ