ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ

Date:

spot_img

ಉಡುಪಿ : ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ಸಂಜೆ ಸಂಭ್ರಮದ ಬ್ರಹ್ಮರಥ ಸಹಿತ ಮೂರುತೇರು ಉತ್ಸವ ನಡೆಯಿತು.

ಆಚಾರ್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು. ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಇರಲಿಲ್ಲ.

ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆದಿದ್ದು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿದೇಶದಿಂದ ಭಕ್ತಿ ಬ್ರುಂಗ ಸ್ವಾಮೀಜಿ ಉತ್ಸವದಲ್ಲಿ ಭಾಗಿ

ಭಕ್ತಿ ಬೃಂಗ ಶ್ರೀ ಗೋವಿಂದ ಸ್ವಾಮಿ ಮಹಾರಾಜ್ ಮೂಲತಃ ಅಮೆರಿಕದಲ್ಲಿ 1971 ರಲ್ಲಿ ಇಸ್ಕಾನ್‌ನ ಪ್ರಭುಪಾದರಿಂದ ಪ್ರಭಾವಿತರಾಗಿ ದೀಕ್ಷೆ ಪಡೆದವರು. ಇವರು ವಿದೇಶದಿಂದ ಉಡುಪಿಗೆ ಆಗಮಿಸಿ, ರಥೋತ್ಸವದಲ್ಲಿ ಭಾಗಿಯಾದರು. ಅವರು ಖಜಕಿಸ್ತಾನ ಮುಂತಾದ ಇಸ್ಲಾಂ ರಾಷ್ಟ್ರಗಳಲ್ಲಿ ಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿದ್ದಾರೆ.

ಇಂದು ಚೂರ್ಣೋತ್ಸವ
ಜ.15ರ ಬೆಳಿಗ್ಗೆ 9ರಿಂದ ರಥಬೀದಿಯಲ್ಲಿ ಚೂರ್ಣೋತ್ಸವ ನಡೆಯಲಿದ್ದು ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು ಮಕರ ಸಂಕ್ರಾಂತಿಯಂದು ಏಕಾದಶಿಯ ನಿರ್ಜಲ ಉಪವಾಸದಲ್ಲಿದ್ದು, ಮಾರನೆ ದಿನ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆನಂತರ ಚೂರ್ಣೋತ್ಸವ ಆರಂಭವಾಗಲಿದೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀಟ್ ಹಗರಣ: ಸೋನಂ ವಾಂಗ್ಚುಕ್ ಉಪವಾಸ ಅಂತ್ಯಕ್ಕೆ 3 ಷರತ್ತು

ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ನಿರತರಾಗಿರುವ ಸೋನಂ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಗೊಳಿಸಲು 3 ಪ್ರಮುಖ ಷರತ್ತು ವಿಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆತ್ರಾಡಿ ಶಾಂಭವಿ ಹೋಟೆಲ್ ಆಟಿ ಆಹಾರ ಉತ್ಸವ

ಉಡುಪಿಯ ಶಾಂಭವಿ ಹೋಟೆಲ್‌ನಲ್ಲಿ ಜುಲೈ 24 ರಿಂದ ಸಾಂಪ್ರದಾಯಿಕ 'ಆಟಿ ದ ಒಂಜಿ ಊಟ' ಆಹಾರ ಉತ್ಸವ ಆರಂಭವಾಗಲಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.