
ಉಡುಪಿ: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರಾಧ್ಯ ಭಟ್ ಅವರು ಮೂರು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಗಸ್ಟ್ 3, 2025 ರಂದು ನಡೆದ ಈ ಸ್ಪರ್ಧೆಯನ್ನು ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ನೇತೃತ್ವದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ , ಶ್ರೀ ಕೃಷ್ಣ ಮಠ ,ಪತಂಜಲಿ ಯೋಗ ಪೀಠ , ಹರಿದ್ವಾರ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
18 ರಿಂದ 28 ವರ್ಷದ ವಯೋ ವಿಭಾಗದಲ್ಲಿ ಸ್ಪರ್ಧಿಸಿದ್ದ ಆರಾಧ್ಯ ಭಟ್, ಟ್ರಡಿಷನಲ್, ಸುಡೈನ್ ಮತ್ತು ಫಾರ್ವರ್ಡ್ ಬೆಂಡಿಂಗ್ ಎಂಬ ಮೂರೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಿರಿಯಡಕದ ಶ್ರೀಮತಿ ಶಾಲಿನಿ ಮತ್ತು ಶ್ರೀ ಪಿ. ರಾಧಾಕೃಷ್ಣ ಭಟ್ ಅವರ ಸುಪುತ್ರನಾದ ಆರಾಧ್ಯ ಭಟ್ ಪ್ರಸ್ತುತ ಉಜಿರೆಯ ಪ್ರತಿಷ್ಠಿತ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರ ಸಾಧನೆಗೆ ಎಲ್ಲರಿಂದ ಅಭಿನಂದನೆಗಳು ವ್ಯಕ್ತವಾಗಿವೆ.