ಉಡುಪಿಯ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ₹13.19 ಲಕ್ಷ ವಂಚನೆ!

Date:

spot_img

ಉಡುಪಿ: ನಗರದ ಕೋರ್ಟ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಉಡುಪಿ ಶಾಖೆಯಲ್ಲಿ ವ್ಯಕ್ತಿಯೋರ್ವ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹13,19,000 ರೂಪಾಯಿ ನಗದು ಪಡೆದು ವಂಚನೆಗೈದ ಘಟನೆ ನಡೆದಿದೆ. ವಂಚನೆ ಮಾಡಿದ ಆರೋಪಿಯನ್ನು ಪುನೀತ್ ಆನಂದ ಕೋಟ್ಯಾನ್ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ

ಬ್ಯಾಂಕ್ ಆಫ್ ಮಹಾರಾಷ್ಟ್ರದ ಉಡುಪಿ ಶಾಖೆಯ ಶಾಖಾಧಿಕಾರಿ ಅಭಿಷೇಕ್ ಗೌಡ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಪುನೀತ್ ಆನಂದ ಕೋಟ್ಯಾನ್ ಎಂಬಾತನು:

  • ಜೂನ್ 18, 2025 ರಂದು: ಬ್ಯಾಂಕಿಗೆ ಬಂದು 50 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹3,20,000 ಸಾಲ ಪಡೆದುಕೊಂಡಿರುತ್ತಾನೆ.
  • ಜುಲೈ 02, 2025 ರಂದು: ಸುಮಾರು 177.40 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹9,99,000 ಸಾಲವನ್ನು ಪಡೆದುಕೊಂಡಿರುತ್ತಾನೆ.

ಕೆಲವು ದಿನಗಳ ಹಿಂದೆ ಪುನೀತ್ ಆನಂದ ಕೋಟ್ಯಾನ್ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ತಿಳಿದುಬಂದಿದೆ. ಕೂಡಲೇ ಬ್ಯಾಂಕಿನಲ್ಲಿ ಪುನೀತ್ ಅಡವಿಟ್ಟಿದ್ದ ಚಿನ್ನಾಭರಣಗಳ ಪರೀಕ್ಷೆ ನಡೆಸಿದಾಗ, ಅವು ನಕಲಿ ಎಂದು ದೃಢಪಟ್ಟಿವೆ.

ಆರೋಪಿ ಪುನೀತ್ ಆನಂದ ಕೋಟ್ಯಾನ್ ಬ್ಯಾಂಕಿಗೆ ನಕಲಿ ಚಿನ್ನಾಭರಣಗಳನ್ನು ಅಸಲಿ ಚಿನ್ನವೆಂದು ನಂಬಿಸಿ ಒಟ್ಟಾರೆಯಾಗಿ ₹13,19,000 ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರು ದಾಖಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2025 ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಲಾವಣ್ಯಾ ಕೊಲೆ ಪ್ರಕರಣ: ಆರೋಪಿ ಚೇತನ್ ಬಂಧನಕ್ಕೆ ಗಿರೀಶ್ ಧೈರ್ಯ

ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ಬಂಧನಕ್ಕೆ ಸ್ಥಳೀಯ ಯುವಕ ಗಿರೀಶ್ ವಹಿಸಿದ ಸಾಹಸಮಯ ಪಾತ್ರದ ಸಂಪೂರ್ಣ ವಿವರ, ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಆಪ್ತರ ಭೇಟಿಗೆ ಕೋರ್ಟ್ ಸಮ್ಮತಿ

ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜೈಲಿನಲ್ಲಿ ಆಪ್ತರ ಭೇಟಿಗೆ ಅನುಮತಿ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ