spot_img

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧ, ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಸಾಬೀತುಪಡಿಸಿದೆ : ಕಿಶೋರ್ ಕುಮಾರ್ ಕುಂದಾಪುರ

Date:

ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ಕೇವಲ ಧರ್ಮ ಕೇಳಿ ರಕ್ತದೋಕುಳಿ ಹರಿಸಿರುವುದು ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಉಗ್ರರ ನಿರ್ಲಜ್ಜ, ಹೇಡಿತನದ ಪೈಶಾಚಿಕ ಕೃತ್ಯ ಸರ್ವತೃ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಪಾಕ್ ಬೆಂಬಲಿತ ಟಿಆರ್ಎಫ್ ಉಗ್ರರ ದಾಳಿಯಲ್ಲಿ ಮೃತರಾಗಿರುವ ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಸಹಿತ 28 ಅಮಾಯಕ ಪ್ರವಾಸಿಗರ ಕಗ್ಗೊಲೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೀಭತ್ಸ್ಯ ಘಟನೆಗೆ ದೇಶಾದ್ಯoತ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದ್ದು ಕೇಂದ್ರ ಸರಕಾರ, ಅಟ್ಟಹಾಸ ಮೆರೆದ ಉಗ್ರರನ್ನು ಬೇಟೆಯಾಡಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ.

ಸಮಾಜದಲ್ಲಿ ತುಷ್ಟೀಕರಣ, ವಿಭಜಕ ನೀತಿ ತಾಂಡವವಾಡುತ್ತಿರುವ ಕಾಲಘಟ್ಟದಲ್ಲಿ ವಿಚಲಿತರಾಗಿರುವ ಹಿಂದೂ ಧರ್ಮೀಯರಿಗೆ ಇಂತಹ ಪೈಶಾಚಿಕ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ರಾಜ್ಯ ಸರಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರಕಾರದತ್ತ ಬೊಟ್ಟು ಮಾಡದೆ ದೇಶದ ಏಕತೆ ಮತ್ತು ದೇಶವಾಸಿಗಳ ಸುರಕ್ಷತೆಗಾಗಿ ಎಲ್ಲ ಸ್ತರಗಳಲ್ಲಿ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವುದು ಇಂದಿನ ಅಗತ್ಯತೆಯಾಗಿದೆ.

ವಿಶ್ವದಾದ್ಯoತ ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವ ಮಹಾನ್ ರಾಷ್ಟ್ರಗಳು ಇಂದು ಈ ಪಿಡುಗಿನ ಮೂಲೋತ್ಪಾಟನೆಗೆ ಭಾರತದ ಜೊತೆ ಕೈಜೋಡಿಸಿರುವ ಸನ್ನಿವೇಶದಲ್ಲಿ ರಾಜ್ಯ ಸರಕಾರ ಭಯೋತ್ಪಾದಕ ದಾಳಿಯಲ್ಲಿ ಮೃತರಾಗಿರುವ ಈರ್ವರು ಕನ್ನಡಿಗರ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಅಗ್ರಹಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿರ್ವದ ಪಾಪನಾಶಿನಿ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್: ಹಿಟಾಚಿ, ಟಿಪ್ಪರ್ ವಶಕ್ಕೆ

ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ

ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು.

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).