
ಶಿವಪುರದ ಇತಿಹಾಸ ಪ್ರಸಿದ್ಧ ಶ್ರೀ ಶಂಕರ ದೇವಸ್ಥಾನದಲ್ಲಿ ಭವ್ಯ ರಥೋತ್ಸವ ಮಹೋತ್ಸವ ಜರುಗಲಿದೆ. ವೇದಮೂರ್ತಿ ಶ್ರೀ ಹೆರ್ಗ ರಾಘವೇಂದ್ರ ತಂತ್ರಿಯವರ ಧಾರ್ಮಿಕ ಮಾರ್ಗದರ್ಶನದಲ್ಲಿ, ಈ ಉತ್ಸವ 11-03-2025, ಮಂಗಳವಾರದಿಂದ 18-03-2025, ಮಂಗಳವಾರದವರೆಗೆ ನಡೆಯಲಿದೆ.
ಈ ಪುಣ್ಯಕಾಲದಲ್ಲಿ, ಎಲ್ಲ ಭಕ್ತರು ಶ್ರೀ ಶಂಕರ ದೇವರ ದಿವ್ಯ ಸನ್ನಿಧಿಯಲ್ಲಿ ಗಂಧ-ಪ್ರಸಾದ ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಹ್ವಾನಿಸಲಾಗಿದೆ.
ಸ್ಥಳ: ಶ್ರೀ ಶಂಕರ ದೇವಸ್ಥಾನ, ಶಿವಪುರ
11-03-2025 ರಿಂದ 18-03-2025
ಎಲ್ಲ ಭಕ್ತಾದಿಗಳು ಸಹೃದಯದಿಂದ ಭಾಗವಹಿಸಿ, ಈ ಧಾರ್ಮಿಕ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ