ಯರ್ಲಪಾಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ‘ಸ್ವಾಸ್ತ್ಯ ಸಂಕಲ್ಪ’ ಜಾಗೃತಿ ಕಾರ್ಯಕ್ರಮ

Date:

spot_img

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.), ಕಾರ್ಕಳ ತಾಲೂಕಿನ ಬೈಲೂರು ವಲಯದ ವತಿಯಿಂದ ಯರ್ಲಪಾಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಸ್ವಾಸ್ತ್ಯ ಸಂಕಲ್ಪ” ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

ಉದ್ಘಾಟನೆ ಮತ್ತು ಹಿತನುಡಿ:

ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಮಂಜುನಾಥ್ ಬೈಲೂರು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ಸದಸ್ಯರಾದ ತಾರನಾಥ ಶೆಟ್ಟಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತನುಡಿಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ:

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಸಿದ್ಧ ಕವಿಯತ್ರಿ ಶ್ರೀಮತಿ ರೇಷ್ಮಾ ಶೆಟ್ಟಿ ಅವರು ಮಾತನಾಡುತ್ತಾ, “ವಿದ್ಯಾರ್ಥಿ ದೆಸೆಯಲ್ಲಿಯೇ ದುಶ್ಚಟಗಳಿಂದ ದೂರವಿರುವುದು ಬಹಳ ಮುಖ್ಯ. ಮಕ್ಕಳು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು,” ಎಂದು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ವಿವರ:

ಯೋಜನೆಯ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾಳಜಿ ಮತ್ತು ಸ್ವಾಸ್ತ್ಯ ಸಂಕಲ್ಪ ಅಭಿಯಾನ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಸೇವಾ ಪ್ರತಿನಿಧಿ ಶ್ರೀಮತಿ ವಿಜಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಶ್ರೀಯುತ ಸುರೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಹ್ಯಾಕಾಶದಲ್ಲಿ ವಿಸ್ಮಯ: ಸೌರಮಂಡಲದ ಆಚೆ ಪತ್ತೆಯಾಯ್ತು ‘ಪಿಂಕ್ ಪ್ಲಾನೆಟ್’.. ಉಪ್ಪಿನ ಮೋಡಗಳ ಕಂಡು ವಿಜ್ಞಾನಿಗಳೇ ಶಾಕ್!

ಜೇಮ್ಸ್ ವೆಬ್ ಟೆಲಿಸ್ಕೋಪ್ ಮಹತ್ವದ ಸಾಧನೆ! 57 ಜ್ಯೋತಿರ್ವರ್ಷ ದೂರದ 'ಗುಲಾಬಿ ಗ್ರಹ' GJ 504b ವಾತಾವರಣದಲ್ಲಿ ಉಪ್ಪಿನ ಮೋಡಗಳು ಪತ್ತೆ.

ಉಡುಪಿ: ಸೈಬರ್ ವಂಚನೆಗೆ ಹಿರಿಯ ಮಹಿಳೆ ಬಲಿ, 65 ಲಕ್ಷ ರೂ. ಲೂಟಿ!

ಉಡುಪಿಯಲ್ಲಿ ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿ ಹಿರಿಯ ಮಹಿಳೆಗೆ 65 ಲಕ್ಷ ರೂ. ವಂಚಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ: ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಪವಾಸದ ಬೆಸ್ಟ್ ಫುಡ್ ‘ರಾಜಗೀರಾ’: ತೂಕ ಇಳಿಸೋಕೆ ಇಷ್ಟೊಂದು ಹೆಲ್ಪ್ ಮಾಡುತ್ತಾ ಈ ದೇವಬೀಜ

ಉಪವಾಸಕ್ಕೆ ಬಳಸುವ ರಾಜಗೀರಾ ಬೀಜಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ತೂಕ ಇಳಿಸಲು ಮತ್ತು ಮೂಳೆಗಳ ಬಲಕ್ಕೆ ಈ ಗ್ಲುಟನ್ ಮುಕ್ತ ಸೂಪರ್‌ಫುಡ್ ಸೇವಿಸಿ.