ಉಚಿತ ಘೋಷಣೆ ನಿಲ್ಲಿಸಿ ಉದ್ಯೋಗ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Date:

spot_img

ನವದೆಹಲಿ: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಘೋಷಿಸುವ ‘ಉಚಿತ ಕೊಡುಗೆ’ಗಳ (Freebies) ಸಂಸ್ಕೃತಿಯ ವಿರುದ್ಧ ಸುಪ್ರೀಂ ಕೋರ್ಟ್ ಗುಡುಗಿದೆ. ಸರ್ಕಾರಗಳ ಆದ್ಯತೆ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿರಬೇಕೇ ಹೊರತು, ಆರ್ಥಿಕತೆಗೆ ಹೊರೆಯಾಗುವ ಉಚಿತ ಯೋಜನೆಗಳನ್ನಲ್ಲ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.

ದೇಶದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ರಾಜಕೀಯ ಪಕ್ಷಗಳ ಉಚಿತ ಯೋಜನೆಗಳ ಘೋಷಣೆಯು ಕಳವಳಕಾರಿ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಇಂತಹ ಘೋಷಣೆಗಳು ರಾಜ್ಯ ಸರ್ಕಾರಗಳನ್ನು ಸಾಲದ ಸುಳಿಗೆ ತಳ್ಳುತ್ತಿವೆ ಮತ್ತು ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. “ಸರ್ಕಾರಗಳು ಜನರಿಗೆ ಸ್ವಾವಲಂಬಿ ಬದುಕು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕೇ ಹೊರತು, ಸಾರ್ವಜನಿಕರ ಹಣವನ್ನು ಉಚಿತ ಯೋಜನೆಗಳಿಗೆ ವ್ಯಯಿಸುವುದು ಸರಿಯಲ್ಲ” ಎಂದು ಪೀಠವು ಕಿವಿಮಾತು ಹೇಳಿದೆ.

ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ಜನರಿಗೆ ಉಚಿತ ವಿದ್ಯುತ್ ನೀಡಲು ಮುಂದಾಗಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ವೇಳೆ ಈ ಪ್ರಮುಖ ಅಂಶಗಳು ಚರ್ಚೆಗೆ ಬಂದವು. 2024 ರ ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕಾಯ್ದೆಯು ವಿತರಣಾ ಕಂಪನಿಗಳು (Discoms) ಭಾರಿ ನಷ್ಟ ಅನುಭವಿಸುವುದನ್ನು ತಡೆಯುವ ಉದ್ದೇಶ ಹೊಂದಿದೆ. ತಮಿಳುನಾಡು ವಿದ್ಯುತ್ ವಿತರಣಾ ಸಂಸ್ಥೆಯು ಈ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿತ್ತು. ಉಚಿತ ಕೊಡುಗೆಗಳು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಮತ್ತು ಇಡೀ ರಾಜ್ಯದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಾರದು ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಹ್ಯಾಕಾಶದಲ್ಲಿ ವಿಸ್ಮಯ: ಸೌರಮಂಡಲದ ಆಚೆ ಪತ್ತೆಯಾಯ್ತು ‘ಪಿಂಕ್ ಪ್ಲಾನೆಟ್’.. ಉಪ್ಪಿನ ಮೋಡಗಳ ಕಂಡು ವಿಜ್ಞಾನಿಗಳೇ ಶಾಕ್!

ಜೇಮ್ಸ್ ವೆಬ್ ಟೆಲಿಸ್ಕೋಪ್ ಮಹತ್ವದ ಸಾಧನೆ! 57 ಜ್ಯೋತಿರ್ವರ್ಷ ದೂರದ 'ಗುಲಾಬಿ ಗ್ರಹ' GJ 504b ವಾತಾವರಣದಲ್ಲಿ ಉಪ್ಪಿನ ಮೋಡಗಳು ಪತ್ತೆ.

ಉಡುಪಿ: ಸೈಬರ್ ವಂಚನೆಗೆ ಹಿರಿಯ ಮಹಿಳೆ ಬಲಿ, 65 ಲಕ್ಷ ರೂ. ಲೂಟಿ!

ಉಡುಪಿಯಲ್ಲಿ ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿ ಹಿರಿಯ ಮಹಿಳೆಗೆ 65 ಲಕ್ಷ ರೂ. ವಂಚಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ: ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಪವಾಸದ ಬೆಸ್ಟ್ ಫುಡ್ ‘ರಾಜಗೀರಾ’: ತೂಕ ಇಳಿಸೋಕೆ ಇಷ್ಟೊಂದು ಹೆಲ್ಪ್ ಮಾಡುತ್ತಾ ಈ ದೇವಬೀಜ

ಉಪವಾಸಕ್ಕೆ ಬಳಸುವ ರಾಜಗೀರಾ ಬೀಜಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ತೂಕ ಇಳಿಸಲು ಮತ್ತು ಮೂಳೆಗಳ ಬಲಕ್ಕೆ ಈ ಗ್ಲುಟನ್ ಮುಕ್ತ ಸೂಪರ್‌ಫುಡ್ ಸೇವಿಸಿ.