
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರೀಕ್ಷಿಸಿದ್ದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ 66.14% ಪಾಸ್ ಶೇಕಡಾವಾರು ದಾಖಲಾಗಿದ್ದು, ಹಲವಾರು ವಿದ್ಯಾರ್ಥಿಗಳು ಗಮನಸೆಳೆಯುವ ಸಾಧನೆ ಮಾಡಿದ್ದಾರೆ.
ಈ ಬಾರಿ 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ರಾಜ್ಯದ 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
ಅದಷ್ಟೇ ಅಲ್ಲದೆ , ಈ ಬಾರಿಯ ಫಲಿತಾಂಶದಲ್ಲಿ ಮೊದಲ ಬಾರಿಗೆ 625ಕ್ಕೆ 625 ಅಂಕಗಳನ್ನು ಪಡೆದು 22 ಮಂದಿ ವಿದ್ಯಾರ್ಥಿಗಳು ರಾಜ್ಯದ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ರಾಜ್ಯದ ಪರೀಕ್ಷಾ ಇತಿಹಾಸದಲ್ಲಿ ವಿಶೇಷ ಸಾಧನೆಯಾಗಿ ಮೂಡಿ ಬಂದಿದೆ.
ಫಲಿತಾಂಶವನ್ನು ಮಧ್ಯಾಹ್ನ 12:30 ಗಂಟೆ ನಂತರ ಕೆಳಕಂಡ ಜಾಲತಾಣಗಳಲ್ಲಿ ಪರಿಶೀಲಿಸಬಹುದಾಗಿದೆ:
🔹 kseab.karnataka.gov.in
🔹 karresults.nic.in
ವಿದ್ಯಾರ್ಥಿಗಳಿಗೀಗ ಮುಂದಿನ ಶಿಕ್ಷಣದ ಹೆಜ್ಜೆ ಇಡಲು ದಿಕ್ಕು ನೀಡುವ ಘಳಿಗೆ ಬಂದಿದ್ದು, ಪೋಷಕರು, ಶಿಕ್ಷಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.