ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೆರ್ವಾಶೆ ಗ್ರಾಮದಲ್ಲಿ ಡಿ ಜೀ ಪೇ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಚಾಲನೆ

Date:

spot_img

ಕಾರ್ಕಳ : ಕಾರ್ಕಳ ತಾಲೂಕಿನ ಮಿಯಾರ್ ವಲಯದ ಕೆರ್ವಾಶೆ ಕಾರ್ಯಕ್ಷೇತ್ರದಲ್ಲಿ ದಿನಾಂಕ 25.09.2025 ನೇ ಗುರುವಾರ ಡಿ ಜೀ ಪೇ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಯಿತು.

ಕೆರ್ವಾಶೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಅಮೀನಾ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಕೆ ಮಾಡಿದರು.

ಮಿಯಾರ್ ವಲಯದ ಜನಜಾಗೃತಿ ವೇದಿಕೆಯ ವಲಯದ್ಯಕ್ಷರಾದ ಶ್ರೀಯುತ ಜಯರಾಮ್ ಬಂಗೇರರವರು ಮಾತನಾಡಿ ಯೋಜನೆಯ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇಂತಹ ಡಿ ಜೀ ಪೇ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ಅನುಷ್ಠಾನ ಗೊಳಿಸಿದ ಬಗ್ಗೆ ಪೂಜ್ಯರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಡಿ ಜೀ ಪೇ ಮೂಲಕ ಸಾಧನ ಸ್ವಸಹಾಯ ಸಂಘದ ಮರಿಯಾಂಬಿಯವರು MATM ಮೂಲಕ ನಗದು ಮೊತ್ತವನ್ನು ಪಡೆದುಕೊಂಡರು ಮತ್ತು ಸುದರ್ಶನ್ ರವರು AEPS ಮೂಲಕ ನಗದು ಮೊತ್ತವನ್ನು ಪಡೆದುಕೊಂಡರು. ಎರಡು ಜನರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕಿನ ಯೋಜನಾಧಿಕಾರಿಯವರಾದ ಬಾಲಕೃಷ್ಣ ಹಿರಿಂಜರವರು ಮಾತನಾಡಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಡಿ ಜೀ ಪೇ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನಗಳನ್ನು ಸಂಘದ ಸದಸ್ಯರುಗಳಲ್ಲದೆ ಇತರ ಗ್ರಾಮಸ್ಥರು ಸಹ ಈ ಸೌಲಭ್ಯ ಪಡೆಯುವಂತೆ ಮಾಹಿತಿ ನೀಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ವಲಯಾಧ್ಯಕ್ಷರಾದ ಅಶ್ವಥ್ ನಾರಾಯಣ್, ಜನಜಾಗೃತಿ ವೇದಿಕೆಯ ಸದಸ್ಯರಾದ ಶಶಿಧರ್ ಕುಲಾಲ್, ಶೌರ್ಯ ಘಟಕದ ಮಾಸ್ಟರ್ ಆದ ಸದಾನಂದ ಸಾಲಿಯಾನ್, ಒಕ್ಕೂಟದ ಅಧ್ಯಕ್ಷರುಗಳಾದ ಪ್ರಭಾಕರ್ ನಾಯ್ಕ್ , ಪ್ರಭಾಕರ್ ಗುಡಿಗಾರ್ , ಅರ್ಚಕರಾದ ಶಂಕರ್ ನಾರಾಯಣ್ ಭಟ್, ಶ್ರೀಧರ್ , ಸಹಾಯಕರಾದ ಸದಾಶಿವ್ ಪೂಜಾರಿ, ಸೇವಾ ಪ್ರತಿನಿಧಿ ಮಂಜುಳ, CSC ಸೇವಾದಾರರಾದ ಕುಮಾರಿ ಅಕ್ಷಿತಾ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ತಾಲೂಕು ನೋಡಲ್ ಅಧಿಕಾರಿಯಾದ ಶ್ರೀಯುತ ಮಂಜುನಾಥ್ ರವರು ನಿರೂಪಿಸಿದರು ಮತ್ತು ವಲಯದ ಮೇಲ್ವಿಚಾರಕರಾದ ಶ್ರೀಯುತ ದಿನೇಶ್ ಹೆಗ್ಡೆಯವರು ಎಲ್ಲರನ್ನೂ ಸ್ವಾಗತಿಸಿದರು ಮತ್ತು ಧನ್ಯವಾದಗಳನ್ನು ಸಲ್ಲಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಗೃಹಜ್ಯೋತಿ ಪರಿಶೀಲನೆ: ಗ್ರಾಪಂನಲ್ಲೇ ಪ್ರಕ್ರಿಯೆ ನಡೆಸಲು ಆದೇಶ

ಕಾರ್ಕಳದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಇನ್ಮುಂದೆ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಲಂಚ ಕೇಳಿದರೆ ಅಮಾನತು ಎಚ್ಚರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಿಕ್ಕಿಂ ಸುರಂಗ ಕುಸಿತ ದುರಂತ: 8 ಸಾವು, 18 ಕಾರ್ಮಿಕರು ಸಿಲುಕಿರುವ ಶಂಕೆ

ಸಿಕ್ಕಿಂನ ನಾಮ್ಚಿ ಬಳಿ ಜಲವಿದ್ಯುತ್ ಸುರಂಗ ಕುಸಿದು 8 ಮಂದಿ ಸಾವು. ಮೀಥೇನ್ ಅನಿಲ ಸೋರಿಕೆಯಿಂದ ಕಾರ್ಯಾಚರಣೆಗೆ ಅಡ್ಡಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ