spot_img

ಶ್ರೀ ಕ್ಷೇ. ಧ. ಗ್ರಾ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳದ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ “ಪರಿಸರ ಮಾಹಿತಿ ಮತ್ತು ಗಿಡ ನಾಟಿ” ಕಾರ್ಯಕ್ರಮ

Date:

spot_img

ಪಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳ ಇದರ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ “ಪರಿಸರ ಮಾಹಿತಿ ಮತ್ತು ಗಿಡ ನಾಟಿ” ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪಳ್ಳಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ನಾಯ್ಕ್ ಇವರು ವಹಿಸಿದರು. ಪಳ್ಳಿ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಆಚಾರ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಕಾಂತ್ ಪ್ರಭು ಪಳ್ಳಿ ಇವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭಗಳಲ್ಲಿ ಸೇವಾ ಮನೋಭಾವವದಿಂದ ಧಾವಿಸುವವರು ಇದ್ದರೆ ಅದು ಶೌರ್ಯ ವಿಪತ್ತು ಘಟಕ. ಅವರ ಎಲ್ಲಾ ಕಾರ್ಯಗಳು ಮಾದರಿಯಾಗಿವೆ. ಮುಂದಿನ ಭವಿಷ್ಯಕ್ಕಾಗಿ ಮಾಡಬೇಕಾದ ದೊಡ್ಡ ಆಸ್ತಿ ಅಂದರೆ ಅದು ಸ್ವಚ್ಛ ಪರಿಸರ. ಒಬ್ಬ ವಿದ್ಯಾರ್ಥಿ ಒಂದು ಗಿಡ ನೆಡುವ ಸಂಕಲ್ಪ ಮಾಡಬೇಕು ಆಗ ಮಾತ್ರ ನಮ್ಮ ಸ್ವಚ್ಛ ನಿರ್ಮಲ ಪರಿಸರ ನಿರ್ಮಾಣದ ಕನಸು ನನಸಾಗಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಂಜಪ್ಪ ಇವರು ಸ್ವಾಗತವನ್ನು ಕೋರಿದರು. ಶಿಕ್ಷಕಿಯಾದ ಶ್ರೀಮತಿ ಜ್ಯೋತಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜನಜಾಗ್ರತಿ ವೇದಿಕೆಯ ಸದಸ್ಯರಾದ ಶ್ರೀ ಸಂದೀಪ್, ಕೃಷಿ ಮೇಲ್ವಿಚಾರಕರಾದ ಬ್ರಿಜೇಶ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಯಶೋಧ, ಮುಖ್ಯ ಶಿಕ್ಷಕರರಾದ ಶ್ರೀಮತಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿಯಾದ ಆಶಾಲತಾ, ಶೌರ್ಯ ವಿಪತ್ತು ವಿಭಾಗದ ಸದಸ್ಯರು, ಶಿಕ್ಷಕ – ಶಿಕ್ಷಕಿ ವೃಂದದವರು , ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೈತರೇ ಎಚ್ಚರ ! ಅತಿಯಾದ ಯೂರಿಯಾ ಗೊಬ್ಬರ ಕೃಷಿಗೆ ಶಾಪ: ಬಂಜರಾಗುವ ಭೂಮಿ , ಆರೋಗ್ಯಕ್ಕೆ ಕುತ್ತು

ರೈತರಿಗೆ ಸುಲಭವಾಗಿ ಲಭ್ಯವಿರುವ ಮತ್ತು ಬೆಳೆಗಳ ಬೆಳವಣಿಗೆಗೆ ಶೀಘ್ರ ಫಲಿತಾಂಶ ನೀಡುತ್ತದೆ ಎಂದು ನಂಬಿರುವ ಯೂರಿಯಾ ರಾಸಾಯನಿಕ ಗೊಬ್ಬರವು ಇಂದು ರೈತ ಸಮುದಾಯ ಮತ್ತು ಭೂಮಿಯ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ.

ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ ;ರಕ್ತದಾನ ಶಿಬಿರ ಹಾಗೂ ಸಾಮಾಜಿಕ ನೆರವಿನ ಕಾರ್ಯಕ್ರಮ

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21ರಂದು ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮ: ಪುರುಷ-ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆಗಳು

ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ಪುರುಷ ಮತ್ತು ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಮಹಿಳಾ ಸಮಿತಿಯ ಸಂಚಾಲಕಿ ಬಾನು ಪಿ. ಬಲ್ಲಾಲ್ ಅವರು ಚಾಲನೆ ನೀಡಿದರು.

ಯರ್ಲಪಾಡಿಯಲ್ಲಿ ಭೀಕರ ಸುಳಿಗಾಳಿ: ಹತ್ತಾರು ಮನೆಗಳು, ತೋಟಗಳಿಗೆ ವ್ಯಾಪಕ ಹಾನಿ

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬೀಸಿದ ಭೀಕರ ಸುಳಿಗಾಳಿ ಯರ್ಲಪಾಡಿ ಗ್ರಾಮದ ಜಾರ್ಕಳ ಅರ್ಬಿ ಪ್ರದೇಶದಲ್ಲಿ ಭಾರಿ ಹಾನಿ ಉಂಟುಮಾಡಿದೆ. ಈ ಅನಿರೀಕ್ಷಿತ ಪ್ರಕೃತಿ ವಿಕೋಪದಿಂದಾಗಿ ಹತ್ತಾರು ಮನೆಗಳು, ವಿದ್ಯುತ್ ಕಂಬಗಳು ಹಾಗೂ ಕೃಷಿ ತೋಟಗಳಿಗೆ ತೀವ್ರ ಹಾನಿಯಾಗಿದೆ.