
ಹಿರಿಯಡಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹಿರಿಯಡಕ ವಲಯ, ಕೊಡಿಬೆಟ್ಟು ಕುದಿ 82 ಕಾರ್ಯಕ್ಷೇತ್ರದ ಧರ್ಮ ದೇವತೆ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ವಿಷ್ಣುಮೂರ್ತಿ ಪ್ರೌಢಶಾಲೆ, ಕೊಡಿಬೆಟ್ಟು ಕುದಿ 82 ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮನೋಹರ ಮರಾಠೆ ಸಂಚಾಲಕರು, ವಿಷ್ಣುಮೂರ್ತಿ ಪ್ರೌಢಶಾಲೆ , ಕೊಡಿಬೆಟ್ಟು ಕುದಿ 82 ಇವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮಿ ನಾರಾಯಣ ಪ್ರಭು ಸದಸ್ಯರು ಜಿಲ್ಲಾ ಜನಜಾಗ್ರತಿ ವೇದಿಕೆ ಉಡುಪಿ ಇವರು ವಹಿಸಿಕೊಂಡಿದ್ದರು. ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಸಹಕಾರವನ್ನು ನೀಡುತ್ತಿದೆ , ಪರಿಸರದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಸುಜಾತ ಸಾಲಿಯನ್ ಪೊಲೀಸ್ ನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಉಡುಪಿ, ಇವರು ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಈ ಕಾರ್ಯಕ್ರಮ ತುಂಬಾ ಶ್ಲಾಘನೀಯವಾಗಿದೆ , ಇತ್ತೀಚಿನ ದಿನಗಳಲ್ಲಿ ಕಾನೂನು ಮಾಹಿತಿ ಪ್ರತಿಯೊಬ್ಬರಿಗೂ ಬೇಕಾಗಿರುತ್ತದೆ. ಈ ಸಂದರ್ಭ ನಮ್ಮ ಪೊಲೀಸ್ ಇಲಾಖೆಯು ಸದಾ ಮಾಹಿತಿ – ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಚಿಕ್ಕ ವಯಸ್ಸಿನಿಂದ ಮದುವೆ ಮಾಡಿಸುವವರೆಗೆ ಪೋಷಕರಿಗೆ ಜವಾಬ್ದಾರಿ ಇದೆ ಪ್ರತಿಯೊಂದು ಹಂತದಲ್ಲಿಯೂ ಜಾಗರೂಕತೆಯನ್ನು ವಹಿಸಬೇಕು ಎಂದು ತಿಳಿ ಹೇಳಿದರು. ಕಾನೂನಿನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆಯೂ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಅನಸೂಯ , ವಾಣಿಜ್ಯ ಶಾಸ್ತ್ರ ಮುಖ್ಯಸ್ಥರು ಆನಂದ ತೀರ್ಥ ಕಾಲೇಜು ಮೂಡು ಬೆಳ್ಳೆ ಇವರು ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ, ದುಂದು ವೆಚ್ಚದ ಕಡಿವಾಣದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುರೇಂದ್ರನಾಯ್ಕ್ ಕ್ಷೇತ್ರ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ )ಉಡುಪಿ ತಾಲೂಕು ಇವರು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಜ್ಞಾನವಿಕಾಸ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ, ಜ್ಯಾನ ವಿಕಾಸ ಕಾರ್ಯಕ್ರಮದ ಉದ್ದೇಶ ಮಹಿಳಾ ಸಬಲೀಕರಣ ಮತ್ತು ಎಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಶೆಟ್ಟಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ , ಶ್ರೀಮತಿ ಆಶಾ ಡಿ ಶೆಟ್ಟಿ , ನಿಕಟಪೂರ್ವ ಅಧ್ಯಕ್ಷರು ಗ್ರಾಮ ಪಂಚಾಯಿತಿ ಕೊಡಿಬೆಟ್ಟು , ಶ್ರೀ ಗಣೇಶ್ ವಲಯ ಅಧ್ಯಕ್ಷರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಿರಿಯಡ್ಕ ವಲಯ, ವಲಯದ ಮೇಲ್ವಿಚಾರಕರಾದ ರಾಜು, ಜ್ಞಾನವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ , ಕುದಿ 82 ಒಕ್ಕೂಟದ ಅಧ್ಯಕ್ಷರಾದ ಪ್ರಸನ್ನ ಹೆಗ್ಡೆ , ಸೇವಾ ಪ್ರತಿನಿಧಿ ಶಾಲಿನಿ , ಒಕ್ಕೂಟದ ಪದಾಧಿಕಾರಿಗಳು ಕೇಂದ್ರದ ಸರ್ವ ಸದಸ್ಯರುಗಳು ಹಾಗೂ ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರು ನಡೆಸಿಕೊಟ್ಟರು.