ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಸ್‌ಪಿ ಡಾ.ಅರುಣ್‌ರವರಿಂದ ಪೊಲೀಸ್ ಇಲಾಖೆಗೆ ಖಡಕ್ ವಾರ್ನಿಂಗ್ !

Date:

spot_img

ಮಂಗಳೂರು : ಮಂಗಳೂರಿನಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಾ. ಅರುಣ್ ಅವರು ಗಂಭೀರ ವಾರ್ನಿಂಗ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಎಎಸ್ಐ, ಹೆಡ್‌ಕಾನ್ಸ್ಟೇಬಲ್ ಹಾಗೂ ಪಿಸಿಗಳ ಸಂಪೂರ್ಣ ವಿವರವನ್ನು ಮೇ 31ರಂದು ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಎಲ್ಲಾ ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಾಹಿತಿಯಲ್ಲಿ ತಪ್ಪು ಕಂಡುಬಂದರೆ, ಸಂಬಂಧಿತ ಠಾಣಾಧಿಕಾರಿ ಅಥವಾ ಬರಹಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಲ್ಲದೇ, ವರ್ಗಾವಣೆಯಾದರೂ ಮತ್ತೆ ಅದೇ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿರುವವರು, ಪ್ರಮೋಷನ್ ನಂತರ ಕೂಡಾ ಹಳೆ ಠಾಣೆಯಲ್ಲೇ ಮುಂದುವರೆದವರು, ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದರೆ ಅವರ ಮಾಹಿತಿ, ಹಾಗೆಯೇ ನಿವೃತ್ತಿಗೆ 2 ವರ್ಷದೊಳಗೆ ಇರುವ ಸಿಬ್ಬಂದಿಯ ವಿವರಗಳನ್ನು ಕೂಡಾ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಪೊಲೀಸ್ ವರ್ಗಾವಣೆ ಸೇರಿದಂತೆ ಸಂಯೋಜನೆ ಗೊಂದಲದ ವಿಚಾರಗಳು ಪ್ರಚಲಿತದಲ್ಲಿದ್ದು , ಇದೀಗ ಉಡುಪಿ ಎಸ್ಪಿಯಾಗಿ ಜನಪ್ರಿಯತೆ ಗಳಿಸಿದ್ದ ಡಾ. ಅರುಣ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಮೊದಲ ದಿನವೇ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಇಲಾಖೆಯೊಳಗಿನ ಶಿಸ್ತು ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ ಮತ್ತು ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ..

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀಟ್ ಹಗರಣ: ಸೋನಂ ವಾಂಗ್ಚುಕ್ ಉಪವಾಸ ಅಂತ್ಯಕ್ಕೆ 3 ಷರತ್ತು

ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ನಿರತರಾಗಿರುವ ಸೋನಂ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಗೊಳಿಸಲು 3 ಪ್ರಮುಖ ಷರತ್ತು ವಿಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆತ್ರಾಡಿ ಶಾಂಭವಿ ಹೋಟೆಲ್ ಆಟಿ ಆಹಾರ ಉತ್ಸವ

ಉಡುಪಿಯ ಶಾಂಭವಿ ಹೋಟೆಲ್‌ನಲ್ಲಿ ಜುಲೈ 24 ರಿಂದ ಸಾಂಪ್ರದಾಯಿಕ 'ಆಟಿ ದ ಒಂಜಿ ಊಟ' ಆಹಾರ ಉತ್ಸವ ಆರಂಭವಾಗಲಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.