spot_img

ಪಂಚ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಸ್ಥಾನದ ಕುರಿತು ಸುನಿಲ್ ಕುಮಾರ್ ನೀಡಿದ ಹೇಳಿಕೆಯನ್ನು ಖಂಡಿಸಿದ ಶುಭದ ರಾವ್

Date:

ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಸುನೀಲ್ ಕುಮಾರ್‌ ಶಾಸಕರನ್ನೇ ಗ್ಯಾರಂಟಿ ಯೋಜನಾ ಸಮಿತಿಯ ಅದ್ಯಕ್ಷರನ್ನಾಗಿ ಮಾಡಬೇಕು ಎಂದು ಅಂಗಲಾಚುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ, ಮತ್ತು ರಾಜ್ಯದಲ್ಲಿ ಗ್ಯಾರಂಟಿ ಯೋಜ‌ನೆ ಎಷ್ಟು ಪ್ರಭಾವ ಬೀರುತ್ತಿದೆ ಎಂದು ಸ್ಪಷ್ಟವಾಗುತ್ತದೆ. ಮೊದಲಿನಿಂದಲೂ ಅಪಹಾಸ್ಯ ಮಾಡುತ್ತಿದ್ದ ಶಾಸಕರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತದೆ. ನಮ್ಮ ಶಾಸಕರಿಗೆ ಇಂತಹ ದುರ್ಗತಿ ಬರಬಾರದಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆಯ ಮೊದಲು ಕಾಂಗ್ರೆಸ್ ನೀಡಿದ ಪಂಚ ಗ್ಯಾರಂಟಿ ಭರವಸೆ ಯನ್ನು ಜನರಿಗೆ ತಲುಪಿಸಲು ಸಾಧ್ಯವೇ ಇಲ್ಲ ಎಂದು ಗೇಲಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಅಪಹಾಸ್ಯ ಮಾಡಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯವ್ಯಾಪಿ ಯಶಸ್ವಿಯಾಗಿ ಪ್ರಚಾರ ಪಡೆದಾಗ ಅದೇ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬಿಜೆಪಿಯು ನಕಲು ಮಾಡಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದರು.

ಇಷ್ಟೆಲ್ಲಾ ಆದ ಬಳಿಕ ಈಗ ಅಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳು ಎಂದು ಬಡವರನ್ನು ಗೇಲಿ ಮಾಡಿದ ಸುನೀಲ್ ಕುಮಾರ್ ಸಹಿತ ಬಿಜೆಪಿ ನಾಯಕರುಗಳು ಇಂದು ಅದೇ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗೆ ನಮನ್ನು ಅಧ್ಯಕ್ಷರನ್ನಾಗಿ ಸೇರಿಸಿಕೊಳ್ಳಿ ಎಂದು ಅಂಗಾಲಾಚುತ್ತಿದ್ದಾರೆ. ಇವರಿಗೆ ಇಂತಹ ದುರ್ಗತಿ ಬೇಕಿತ್ತಾ, ಇನ್ನಾದರೂ ಮೊದಲು ಆಡಿದ ಮಾತಿಗೆ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಆತ್ಮಹತ್ಯಾ ನಿರೋಧ ದಿನ

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯಾ ನಿರೋಧ ಸಂಘಟನೆಯ (IASP) ಜಂಟಿ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಆಪಲ್‌ನಿಂದ ಐಫೋನ್ ಲೋಕಕ್ಕೆ ಹೊಸ ಸ್ಪರ್ಧಿ: ಅತಿ ತೆಳುವಾದ ‘ಐಫೋನ್ ಏರ್’ ಅನಾವರಣ!

ಅತಿ ತೆಳುವಾದ ಐಫೋನ್ 'ಏರ್' ಮಾದರಿ, ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್ 17, ಸುಧಾರಿತ ಏರ್‌ಪಾಡ್ಸ್ ಪ್ರೊ 3 ಮತ್ತು ರಕ್ತದೊತ್ತಡ ಮಾನಿಟರ್ ಹೊಂದಿರುವ ಆಪಲ್ ವಾಚ್.

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.

ಸಾಂಬಾರಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು: ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕೆಂಪು ಮೆಣಸಿನಕಾಯಿ ಕೇವಲ ಆಹಾರಕ್ಕೆ ಖಾರ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಅನೇಕ ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ.