
ಕಾರ್ಕಳ : ಕಾರ್ಕಳದ ನಿಟ್ಟೆ ಬ್ರಹ್ಮಾಕುಮಾರಿಸ್ ಬೃಂದಾವನ್ ಧ್ಯಾನ ಕೇಂದ್ರದಲ್ಲಿ ಆಗಸ್ಟ್ 17ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಸಂಭ್ರಮಗಳಿಂದ ಆಚರಿಸಲಾಯಿತು.

ಮುದ್ದುಮಕ್ಕಳ ನೃತ್ಯ ವೈಭವ
ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಣೆಗೆ ಮೆರುಗು ನೀಡಿದವು. ಈ ಸಂದರ್ಭದಲ್ಲಿ ಮಕ್ಕಳು ರಾಧಾ-ಕೃಷ್ಣರ ವೇಷಭೂಷಣಗಳನ್ನು ಧರಿಸಿ ನೃತ್ಯ ಪ್ರದರ್ಶಿಸಿದರು. ಅವರ ಮುದ್ದು ನೃತ್ಯವು ಎಲ್ಲರ ಮನಸೂರೆಗೊಂಡಿತು. ಅಲ್ಲದೆ, ಜನ್ಮಾಷ್ಟಮಿಯ ಸಡಗರದಲ್ಲಿ ಗರ್ಬಾ ನೃತ್ಯವೂ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.

ಭಕ್ತರು ಮತ್ತು ಕೇಂದ್ರದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.