
ಉಡುಪಿ : ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇವರ ರಜತ ಪೂರ್ತಿ ಸಂಭ್ರಮದ ಸಂದರ್ಭದಲ್ಲಿ ಮನೆ , ಮಠ , ಮಂದಿರ , ದೇವಸ್ಥಾನದಲ್ಲಿ ನಮ್ಮ ಮನೆ , ಗೋವು , ನಮ್ಮ ಗ್ರಾಮ , ನಮ್ಮ ರಾಜ್ಯ , ರಾಷ್ಟ್ರದ ರಕ್ಷಣೆಗಾಗಿ ದಶಾವತಾರ ಮಂತ್ರ ಹೋಮವನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ನೆಲ , ನಮ್ಮ ಜಲ , ಹಿಂದೂ ಧರ್ಮದ ರಕ್ಷಣೆ , ಲೋಕ ಕಲ್ಯಾಣ , ಶಿಷ್ಠರ ರಕ್ಷಣೆ , ದುಷ್ಠ ಶಕ್ತಿಗಳ ಸಂಹಾರ ಇದರ ಪ್ರಧಾನ ಉದ್ದೇಶವಾಗಿದೆ.
ಇದೇ ಬರುವ ದಿನಾಂಕ 13/09/2025 ನೇ ಶನಿವಾರ ಬೆಳಿಗ್ಗೆ 7:30 ರಿಂದ 12:30 ರ ವರೆಗೆ ಉಡುಪಿ ಕುತ್ಪಾಡಿಯ ಶ್ರೀ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ರವರ ಅದ್ವೆರ್ಯುತನದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಸಹಯೋಗದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ದಶಾವತಾರ ಮಂತ್ರ ಹೋಮ ಜರುಗಲಿದೆ. ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರಾದ ಶ್ರೀ ಪಿ ರಾಧಾಕೃಷ್ಣ ಭಟ್ ಮತ್ತು ಕಾರ್ಯದರ್ಶಿ ಶ್ರೀ ವಿಶೋತ್ತಮ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.