
ಶಿವಮೊಗ್ಗ: ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ಆಗಸ್ಟ್ 3ರಂದು ನಡೆದ 3ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎರ್ಲಪಾಡಿ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪ್ರಥ್ವಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಕಟಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಥ್ವಿ, ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಪೂರ್ಣಿಮ ಮತ್ತು ಚಂದ್ರಶೇಖರ ದಂಪತಿಯ ಪುತ್ರಿಯಾದ ಇವರು, ತರಬೇತುದಾರರಾದ ಸೋಮನಾಥ ಮತ್ತು ವಿಜಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಪ್ರಥ್ವಿಯವರ ಈ ಗೆಲುವು ಎರ್ಲಪಾಡಿ ಗ್ರಾಮ, ಶಾಲೆ ಮತ್ತು ಪೋಷಕರಿಗೆ ಹೆಮ್ಮೆ ತಂದಿದೆ.