
ಉಡುಪಿ: ಹಿರಿಯಡ್ಕದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಕೃತಿಯ ಮಡಿಲಲ್ಲಿ ಅರಮನೆಯಂತೆ ಕಂಗೊಳಿಸುತ್ತಿರುವ ‘ಶ್ಯಾಮಿಲಿ ಸ್ಪ್ರಿಂಗ್ಸ್’ ರೆಸಾರ್ಟ್ ಹಾಗೂ ಕನ್ವೆನ್ಷನ್ ಸೆಂಟರ್ ಏಪ್ರಿಲ್ 7 ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಕರಾವಳಿಯ ಜನತೆಗೆ ಕೈಗೆಟುಕುವ ದರದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸುವುದು ಡಾ. ಜಿ. ಶಂಕರ್ ಅವರ ಈ ಮಹತ್ವಾಕಾಂಕ್ಷೆಯ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಂಕೀರ್ಣವು ಆಧುನಿಕ ವಾಸ್ತುಶಿಲ್ಪ ಮತ್ತು ಕರಕುಶಲ ಕಲೆಗಳ ಸುಂದರ ಸಂಗಮವಾಗಿದೆ. ಮದುವೆ, ಕಾರ್ಪೊರೇಟ್ ಸಭೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಿರುವ ಈ ರೆಸಾರ್ಟ್, ಕೋಸ್ಟಲ್‌ವುಡ್ ರೆಸಾರ್ಟ್ಸ್ ಉಡುಪಿಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿನ ಪ್ರವೇಶ ದ್ವಾರವು ಗತಕಾಲದ ವೈಭವವನ್ನು ನೆನಪಿಸುವಂತಿದ್ದು, ಬರುವ ಅತಿಥಿಗಳಿಗೆ ರಾಜಮನೆತನದ ಅನುಭವವನ್ನು ನೀಡುತ್ತದೆ.

ಶ್ಯಾಮಿಲಿ ಸ್ಪ್ರಿಂಗ್ಸ್‌ನ ಪ್ರಮುಖ ಆಕರ್ಷಣೆಗಳು:
- ಶಾನ್ವಿಕ ಕನ್ವೆನ್ಷನ್ ಸೆಂಟರ್: 1000 ಮಂದಿ ಆಸೀನರಾಗಬಹುದಾದ ಸಂಪೂರ್ಣ ಹವಾನಿಯಂತ್ರಿತ ಅತ್ಯಾಧುನಿಕ ಸಭಾಂಗಣ.
- ಶನಾಯ ಗ್ರಾಂಡ್ ಹಾಲ್: ಭೋಜನಕ್ಕೆಂದೇ ಮೀಸಲಾದ ವಿಶಾಲವಾದ ಹಾಲ್ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಾಗಿ ಪ್ರತ್ಯೇಕ ಅಡುಗೆ ಕೋಣೆಗಳ ವ್ಯವಸ್ಥೆ.
- ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್: ಮೆಹಂದಿ, ಹಳದಿ ಮತ್ತು ನೈಟ್ ಪಾರ್ಟಿಗಳಿಗಾಗಿ ವಿಶಾಲವಾದ ಹೊರಾಂಗಣ ತಾಣ.
- ವಸತಿ ಸೌಲಭ್ಯ: 30 ಐಷಾರಾಮಿ ಎಸಿ ಡಿಲೆಕ್ಸ್ ಕೊಠಡಿಗಳು ಮತ್ತು 2 ಸುಸಜ್ಜಿತ ವಿಲ್ಲಾಗಳು ಲಭ್ಯವಿವೆ.
- ಇತರ ಸೌಕರ್ಯಗಳು: ಸ್ವಿಮ್ಮಿಂಗ್ ಫುಲ್, ಅತ್ಯಾಧುನಿಕ ಜಿಮ್, ಮಕ್ಕಳ ಆಟದ ಮೈದಾನ ಮತ್ತು ರಿಕ್ರಿಯೇಶನ್ ಕ್ಲಬ್.
- ಪಾರ್ಕಿಂಗ್: 300ಕ್ಕೂ ಹೆಚ್ಚು ಕಾರುಗಳನ್ನು ನಿಲುಗಡೆ ಮಾಡಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.
ಈ ಸಂಕೀರ್ಣದ ಸನಿಹದಲ್ಲೇ ಶ್ರೀ ಪ್ರಸನ್ನ ಗಣಪತಿ ಮಂದಿರವಿದ್ದು, ಧಾರ್ಮಿಕ ವಿಧಿವಿಧಾನಗಳಿಗೆ ಪೂರಕವಾಗಿದೆ. ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲು ಫ್ಯಾಮಿಲಿ ರೆಸ್ಟೋರೆಂಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಸಾಮಾನ್ಯ ಜನರ ಬಜೆಟ್‌ಗೆ ಅನುಗುಣವಾಗಿ ದರಗಳನ್ನು ನಿಗದಿಪಡಿಸಲಾಗಿದ್ದು, ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗಳು ಆರಂಭವಾಗಿವೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448930820 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.













