
ಕಾರ್ಕಳ: ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸೇವೆಯಿಂದ ಗುರುತಿಸಿಕೊಂಡಿರುವ ‘ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ’ ಸಂಸ್ಥೆಯ 2026/2027ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಸಾಂಗವಾಗಿ ನೆರವೇರಿದೆ. ನಿಕಟಪೂರ್ವ ಪದಾಧಿಕಾರಿಗಳಿಂದ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಮುಂಬರುವ ವರ್ಷಗಳಲ್ಲಿ ಹಲವು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸೌಮ್ಯ ಶೆಟ್ಟಿ ಬೈಲೂರು ಅವರು ಜವಾಬ್ದಾರಿ ವಹಿಸಿಕೊಂಡಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ಪ್ರಭು ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ವರಿ ನವೀನ್ ಅವರು ಆಯ್ಕೆಯಾಗಿದ್ದಾರೆ. ಸ್ಥಳೀಯವಾಗಿ ವಿವಿಧ ರಂಗಗಳಲ್ಲಿ ಸಕ್ರಿಯರಾಗಿರುವ ಕ್ರೀಡಾಪಟುಗಳು, ಸಾಂಸ್ಕೃತಿಕ ನಾಯಕರು ಹಾಗೂ ಸಮಾಜಸೇವಕರನ್ನು ಒಳಗೊಂಡ ಬಲವಾದ ಆಡಳಿತ ಮಂಡಳಿಯನ್ನು ಈ ಬಾರಿ ರಚಿಸಲಾಗಿದೆ.
ಸಂಸ್ಥೆಯ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸ್ಥಾಪಕಾಧ್ಯಕ್ಷ ಕನಸುಗಾರ ನವೀನ್ ಬೈಲೂರು ಅವರ ಮಾರ್ಗದರ್ಶನದಲ್ಲಿ ವಿದೇಶಿ ಹಾಗೂ ತೌರಿನ ಸ್ಥಾಪಕ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನೂ ವಿಸ್ತರಿಸಲಾಗಿದೆ.

ಪ್ರಮುಖ ಆಯ್ಕೆಗಳ ಮುಖ್ಯಾಂಶಗಳು:
- ಅಧ್ಯಕ್ಷರು: ಸೌಮ್ಯ ಶೆಟ್ಟಿ ಬೈಲೂರು
- ಪ್ರಧಾನ ಕಾರ್ಯದರ್ಶಿ: ಶ್ರೀಕಾಂತ್ ಪ್ರಭು ಪಳ್ಳಿ
- ಕೋಶಾಧಿಕಾರಿ: ರಾಜೇಶ್ವರಿ ನವೀನ್
- ಮಹಿಳಾ ಘಟಕ: ಚಂದ್ರಿಕಾ ರಾವ್ ಬೈಲೂರು (ಸಂಚಾಲಕಿ), ಸಂಧ್ಯಾ ಆಚಾರ್ಯ ಕೌಡೂರು (ಸಹ ಸಂಚಾಲಕಿ)
- ಬೈಲೂರು ಟೈಗರ್ಸ್ ಸಂಚಾಲಕರು: ದಿನೇಶ್ ಆಚಾರ್ಯ ಕಂಡಳ್ಕೆ
- ಸಂಸ್ಥೆಯ ಸಂಚಾಲಕರು: ಸುನಿಲ್ ಹೆಗ್ಡೆ ಗೋವಿಂದೂರು, ಮಂಜುನಾಥ್ ಪೂಜಾರಿ ಬೈಲೂರು
- ಆರೋಗ್ಯ ಸಂಚಾಲಕರು: ಡಾ. ಶಶಿಕಿರಣ್ ಅಚಾರ್ ಬೈಲೂರು, ರಾಜೇಶ್ ಸಪಳಿಗ ಗೋವಿಂದೂರು
ಬಳಗದ ಉಪಾಧ್ಯಕ್ಷರುಗಳಾಗಿ ಪ್ರಸಾದ್ ಪೂಜಾರಿ ಗರಡಿ ಹಾಗೂ ಸಂತೋಷ್ ಪೂಜಾರಿ ಆಜೆಕಾರು ಆಯ್ಕೆಯಾಗಿದ್ದಾರೆ. ಜೊತೆಗೆ ಕಾರ್ಯದರ್ಶಿಗಳಾಗಿ ಸಚಿನ್ ಪೂಜಾರಿ ಕಣಂಜಾರು ಮತ್ತು ಸಾನಿಧ್ಯ ಪ್ರಕಾಶ್ ಎಲ್ ಶೆಟ್ಟಿಗಾರ್ ಉಚ್ಚಿಲ ಜವಾಬ್ದಾರಿ ವಹಿಸಲಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಸವಿನ್ ಪೂಜಾರಿ ಗೋವಿಂದೂರು, ಅಜಿತ್ ಪೂಜಾರಿ ಕಣಂಜಾರು, ಸರೋಜಿನಿ ಹೆಗ್ಡೆ ನಾರಾವಿ, ವಿಶು ಸಾಲಿಯಾನ್ ಪೆರ್ಡೂರು ಕಾರ್ಯಾಚರಿಸಲಿದ್ದಾರೆ.
ಸಾಂಸ್ಕೃತಿಕ ವಿಭಾಗವನ್ನು ಶಶಿಕಾಂತ್ ಪೂಜಾರಿ ಹೆರ್ಮುಂಡೆ, ಶಶಿಧರ್ ಪೂಜಾರಿ ಗೋವಿಂದೂರು, ಸಣ್ಣು ಶೇಖರ್ ನಲ್ಲೂರು ಹಾಗೂ ವಿಜೇಶ್ ಪೂಜಾರಿ ಗೋವಿಂದೂರು ಮುನ್ನಡೆಸಲಿದ್ದಾರೆ. ಕ್ರೀಡಾ ವಿಭಾಗದ ಹೊಣೆಯನ್ನು ಸವಿತಾ ಪೂಜಾರಿ ಗೋವಿಂದೂರು, ಕುಶಲ ಸುವರ್ಣ ಬೈಲೂರು, ಸುರೇಶ್ ಕುಮಾರ್ ದೇವಗಿರಿ ಮತ್ತು ಕಿರಣ್ ಕುಮಾರ್ ದೇವಗಿರಿ ಅವರಿಗೆ ವಹಿಸಲಾಗಿದೆ. ಮಾಧ್ಯಮ ಪ್ರಚಾರಕರಾಗಿ ಸುಧೀ ಪೂಜಾರಿ ಚಿಕ್ಕಮಗಳೂರು, ಕುಸುಮಾ ಪೂಜಾರಿ ಹೆಪ್ಪಳ ಹಾಗೂ ಸುರೇಶ್ ಮೊಗವೀರ ಗೋವಿಂದೂರು ನಿಯೋಜನೆಗೊಂಡಿದ್ದಾರೆ.
ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ಗಂಗಾಧರ ಮಿತ್ರ (ಇಸ್ರೇಲ್), ವೀಣಾ ಎಸ್ ಭಟ್ ಪಳ್ಳಿ, ಅನೀ ಸತ್ಯ ಪೂಜಾರಿ ಕಲ್ಯಾ, ಜಯಶ್ರೀ ವಿಜಯ್ ಕುಮಾರ್ (ಕುವೈಟ್), ಶೈಲೇಶ್ ನಾಯಕ್ (ದುಬೈ), ಪ್ರಕಾಶ್ ಎಲ್ ಶೆಟ್ಟಿಗಾರ್ (ದುಬೈ), ಜಗದೀಶ್ ಸುವರ್ಣ (ಕುವೈಟ್) ಮತ್ತು ಮೈಕಲ್ ಮಿನೆಜಸ್ (ಕುವೈಟ್) ಮಾರ್ಗದರ್ಶನ ನೀಡಲಿದ್ದಾರೆ.
ಗೌರವ ಸಲಹೆಗಾರರಾಗಿ ಆನಂದ್ ಪೂಜಾರಿ ಬೈಲೂರು, ಸದಾನಂದ್ ಸಾಲಿಯಾನ್ ಬೈಲೂರು, ಮಹೇಶ್ ಬೈಲೂರು, ಸುಮಿತ್ ಶೆಟ್ಟಿ ಕೌಡೂರು, ಸುಬ್ರಹ್ಮಣ್ಯ ಬೈಲೂರು, ಸತೀಶ್ ಕಾತ್ಯಾಯಿನಿ ಕಾರ್ಕಳ, ಸಂತೋಷ್ ಅಮಿನ್ ಗೋವಿಂದೂರು, ಸತೀಶ್ ಪೂಜಾರಿ ಪೊಳಲಿ, ಅರುಣ್ ಪೂಜಾರಿ (ಈಸ್ಟ್ ಆಫ್ರಿಕಾ), ಲತೇಶ್ ಪುತ್ರನ್ ಮಂಗಳೂರು, ವಿತಿನ್ ಶೆಟ್ಟಿ ಬೈಲೂರು, ಪ್ರಕಾಶ್ ನಾಯ್ಕ್ ದೇವಗಿರಿ, ದಿಲೀಪ್ ಸಾಲಿಯಾನ್ ಮುಂಬೈ ಹಾಗೂ ಗುರುಪ್ರಸಾದ್ ಪೂಜಾರಿ ಉದ್ಯಾವರ ನೆರವಾಗಲಿದ್ದಾರೆ.
ಕಾರ್ಯಕಾರಿಣಿ ಸಮಿತಿಯ ನೂತನ ಸದಸ್ಯರಾಗಿ ವಿಜಯ್ ಪೂಜಾರಿ ಕಾರ್ಕಳ, ಅರ್ಚನಾ ದೇವಾಡಿಗ ಕಾರ್ಕಳ, ನಾರಾಯಣ್ ಮೂಲ್ಯ ಕರ್ವಾಲು, ನೀರಜಾ ಪ್ರೇಮ್ ಕುಮಾರ್, ಸವಿತಾ ಆಚಾರ್ಯ ಕಣಂಜಾರು, ಸುಮಾ ಆಚಾರ್ಯ ಬೈಲೂರು ಹಾಗೂ ನವೀನ್ ಪೂಜಾರಿ ಕಾರ್ಕಳ ಆಯ್ಕೆಯಾಗಿದ್ದಾರೆ. ನೂತನ ತಂಡವು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ.













