
ಬೈಲೂರು : ಲಯನ್ಸ್ ಕ್ಲಬ್ ನೀರೆ ಬೈಲೂರು ವತಿಯಿಂದ ಇಂದು ಮೂರು ಪ್ರಮುಖ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾನವೀಯ ಸೇವೆಗೆ ಒತ್ತು ನೀಡಲಾಯಿತು.

1. ನೀರೆ ಗ್ರಾಮ ಪಂಚಾಯತ್‌ಗೆ ಬ್ಯಾರಿಕೇಡ್‌ಗಳ ಕೊಡುಗೆ
ಲಯನ್ಸ್ ಕ್ಲಬ್ ನೀರೆ ಬೈಲೂರು ವತಿಯಿಂದ ನೀರೆ ಗ್ರಾಮ ಪಂಚಾಯತ್‌ಗೆ 4 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ Ln. ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ ಬೈಲೂರು ಅವರು ಈ ಬ್ಯಾರಿಕೇಡ್‌ಗಳನ್ನು ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚಿದಾನಂದ ಪ್ರಭು ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

2. ಚೇತನ ವಿಶೇಷ ಶಾಲೆಗೆ ದಿನಸಿ ವಿತರಣೆ
ಲಯನ್ಸ್ ಕ್ಲಬ್ ನೀರೆ ಬೈಲೂರು ವತಿಯಿಂದ ಕಾರ್ಕಳದ ಚೇತನ ವಿಶೇಷ ಶಾಲೆಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ Ln. ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಈ ಸಾಮಗ್ರಿಗಳನ್ನು ಚೇತನ ವಿಶೇಷ ಶಾಲೆಯ ಸಂಚಾಲಕರಾದ ರಘುನಾಥ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

3. ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಸಾರ್ವಜನಿಕ ಸೇವಾ ಕಾರ್ಯದ ಭಾಗವಾಗಿ, ಲಯನ್ಸ್ ಕ್ಲಬ್ ನೀರೆ ಬೈಲೂರು ವತಿಯಿಂದ ಬೈಲೂರು ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.

ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ರಮೇಶ್ ಶೆಟ್ಟಿ ಜಾರ್ಕಳ, ಲಯನ್ಸ್ ಕ್ಲಬ್ ಕಾರ್ಯದರ್ಶಿ Ln ಸದಾನಂದ ಸಾಲಿಯಾನ್, ಕೋಶಾಧಿಕಾರಿಗಳಾದ Ln ರಾಜೇಶ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷರಾದ Ln ಗುರುಪ್ರಸಾದ್ ಶೆಟ್ಟಿ, ಪ್ರಾಂತ್ಯ ಕಾರ್ಯದರ್ಶಿಗಳಾದ Ln ಸುರೇಶ್ ಸಾಯಿರಾಂ ಹಾಗೂ ಸದಸ್ಯರುಗಳಾದ Ln ಉದಯ್ ಹೆಗ್ಡೆ, Ln ದಿಲೀಪ್ ಶೆಟ್ಟಿ, Ln ವಸಂತ್ ಜಾರ್ಕಳ, Ln ಅಶೋಕ್ ನಾಯಕ್, Ln ಶಾಕೀರ್ ಹುಸೇನ್, Ln ಸತೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್, ರಾಜೇಶ್ ಗೋವಿಂದೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
