
ಕಾರ್ಕಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಹಿರಿಯ ಸ್ವಯಂಸೇವಕರು, ಕಾರ್ಕಳದ ಖ್ಯಾತ ವೈದ್ಯರು ಹಾಗೂ ಕರ್ನಾಟಕ ಕೊಂಕಣಿ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ. ಜಗದೀಶ್ ಪೈ (62) ಅವರು ನಿನ್ನೆ (ಜುಲೈ 28, 2025) ಸಾಯಂಕಾಲ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ವೈದ್ಯ, ಲೇಖಕ, ಅಂಕಣಕಾರ
ಡಾ. ಜಗದೀಶ್ ಪೈ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ಉತ್ತಾನ’ ಪತ್ರಿಕೆಯ ಅಂಕಣಕಾರರಾಗಿದ್ದ ಅವರು, ರಾಷ್ಟ್ರೋತ್ಥಾನ ಪ್ರಕಾಶನದಿಂದ 3 ಪುಸ್ತಕಗಳನ್ನು ಬರೆದಿದ್ದಾರೆ.
ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಜಗದೀಶ್ ಪೈ ಅವರ ದಿವ್ಯ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಗಿದ್ದು, ಅವರ ಅಂತಿಮ ಸಂಸ್ಕಾರ ಇಂದು (ಜುಲೈ 29, 2025) ಸಾಯಂಕಾಲ ನಡೆಯಲಿದೆ.