
ಕಾರ್ಕಳ : ಆಗಸ್ಟ್ 31ರ ಭಾನುವಾರ ಸಂಜೆ, ಬ್ರಾಹ್ಮಣ ಸಖಾ ಬಳಗವು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ ಇದರ ಸಹಯೋಗದೊಂದಿಗೆ ಶ್ರೀಗುರುರಾಘವೇಂದ್ರ ಮಠದಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ 15 ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಾನಿಗಳಿಂದ ಸಂಗ್ರಹಿಸಿದ 1 ಲಕ್ಷ ರೂಗಳ ವಿದ್ಯಾರ್ಥಿವೇತನ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಂತಹ ಬ್ರಾಹ್ಮಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗೌರವ ಧನ ನೀಡಿ ಪುರಸ್ಕರಿಸಲಾಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಡಾ. ಗುರುಚರಣ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು, ಶ್ರೀ ವಿಘ್ನೇಶ್ ಜೆ.ಪಿ, ಪೆರ್ವಾಜೆ ಇವರು ಟ್ರಸ್ಟಿನ ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀ ವೆಂಕಟ್ರಾಜ್ ಭಟ್, ಪೆರ್ವಾಜೆ ಇವರು ಟ್ರಸ್ಟಿನ ಮುಂದಿನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು.
ಕು. ಅನ್ನಿಕಾ ಮತ್ತು ಕು. ರಕ್ಷಿತಾ ಪ್ರಾರ್ಥನೆ ಮಾಡಿದರು. ಡಾ. ಶ್ರೀರಾಮ ಮುಗೆರಾಯ ಕಾರ್ಯಕ್ರಮ ನಿರೂಪಿಸಿ, ಶ್ರೀ ಶ್ರೀನಿವಾಸ ಸುಧಾಳ ಧನ್ಯವಾದ ಸಮರ್ಪಿಸಿದರು.