spot_img

ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದರೆ 1 ಕೋ.ರೂ. ದಂಡ: ಹೊಸ ಮಸೂದೆ ಮಂಡನೆ

Date:

Parameshwara11

ಬೆಂಗಳೂರು : ರಾಜ್ಯದಲ್ಲಿ ಜನಸಂದಣಿ ನಿಯಂತ್ರಿಸಲು ಹಾಗೂ ಅವಘಡಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ‘ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆ-2025’ ಅನ್ನು ಸದನದಲ್ಲಿ ಮಂಡಿಸಿದ್ದಾರೆ. ಈ ಮಸೂದೆಗೆ ಒಪ್ಪಿಗೆ ಸಿಕ್ಕರೆ, ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದರೆ ಭಾರಿ ದಂಡ ಮತ್ತು ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.

ಶಿಕ್ಷೆ ಮತ್ತು ದಂಡದ ವಿವರಗಳು

  • ಅನುಮತಿ ರಹಿತ ಕಾರ್ಯಕ್ರಮ: ಯಾವುದೇ ಕಾರ್ಯಕ್ರಮ ಅಥವಾ ಜನಸಂದಣಿಯನ್ನು ಅನುಮತಿ ಇಲ್ಲದೆ ಆಯೋಜಿಸಿದರೆ, ಕನಿಷ್ಠ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ಅಥವಾ 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
  • ಅವಘಡ ಸಂಭವಿಸಿದರೆ: ಜನಸಂದಣಿ ವಿಪತ್ತಿಗೆ ಕಾರಣರಾದ ಅಥವಾ ನಿರ್ಲಕ್ಷ್ಯ ವಹಿಸಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಕಾದಿದೆ.
    • ಪ್ರಾಣಹಾನಿಯಾದರೆ: ದುರಂತಕ್ಕೆ ಕಾರಣರಾದವರಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
    • ಗಾಯಗಳಾದರೆ: ಜನಸಂದಣಿಯಲ್ಲಿ ಗಾಯಗಳು ಉಂಟಾದರೆ, ಅದಕ್ಕೆ ಕಾರಣರಾದವರಿಗೆ 3 ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಮಸೂದೆಯು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಜಾಗರೂಕತೆಯಿಂದ ಸಂಭವಿಸುವ ದುರಂತಗಳನ್ನು ತಡೆಯಲು ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿರ್ವದ ಪಾಪನಾಶಿನಿ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್: ಹಿಟಾಚಿ, ಟಿಪ್ಪರ್ ವಶಕ್ಕೆ

ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ

ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು.

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).