‘ರವಿಶಂಕರ ಶೇರಿಗಾರ್‌’ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

Date:

spot_img

ಬೆಂಗಳೂರು: ಕಾರ್ಕಳ ಮೂಲದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ರವಿಶಂಕರ ಶೇರಿಗಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಸ್. ಮಧುಬಂಗಾರಪ್ಪ ಅವರು ಈ ನೇಮಕ ಮಾಡಿದ್ದಾರೆ.

25 ವರ್ಷಗಳ ಪಕ್ಷ ನಿಷ್ಠೆ

ರವಿಶಂಕರ ಶೇರಿಗಾರ್ ಅವರು ಕಳೆದ 25 ವರ್ಷಗಳಿಂದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದಲ್ಲದೆ, ಅವರು 2013 ರಿಂದ 2018 ರವರೆಗೆ ಭಾರತೀಯ ನೈರುತ್ಯ ರೈಲ್ವೆಯ ಸಲಹಾ ಸಮಿತಿ ಸದಸ್ಯರಾಗಿಯೂ, 2017 ರ ಗೋವಾ ರಾಜ್ಯದ ಪೋಂಡ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಎಐಸಿಸಿಯಿಂದ ನೇಮಕಗೊಂಡಿದ್ದ ಅವರು, ಆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಾಜಿಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ನಿರ್ದೇಶನದಂತೆ, ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಶಿಫಾರಸ್ಸಿನಂತೆ, ಮುಖಂಡರುಗಳಾದ ಉದಯ ಶೆಟ್ಟಿ ಮುನಿಯಲು, ಮಂಜುನಾಥ್ ಪೂಜಾರಿ ಮುದ್ರಾಡಿ ಸಹಕಾರದಂತೆ ಆಯ್ಕೆ ಪ್ರಕ್ರಿಯೆ ನಡೆದಿದೆ.‌

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಲಾವಣ್ಯಾ ಕೊಲೆ ಪ್ರಕರಣ: ಆರೋಪಿ ಚೇತನ್ ಬಂಧನಕ್ಕೆ ಗಿರೀಶ್ ಧೈರ್ಯ

ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ಬಂಧನಕ್ಕೆ ಸ್ಥಳೀಯ ಯುವಕ ಗಿರೀಶ್ ವಹಿಸಿದ ಸಾಹಸಮಯ ಪಾತ್ರದ ಸಂಪೂರ್ಣ ವಿವರ, ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಆಪ್ತರ ಭೇಟಿಗೆ ಕೋರ್ಟ್ ಸಮ್ಮತಿ

ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜೈಲಿನಲ್ಲಿ ಆಪ್ತರ ಭೇಟಿಗೆ ಅನುಮತಿ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಚಿಕ್ಕಮಗಳೂರು: ಪೂಜಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ದಾಖಲು

ಚಿಕ್ಕಮಗಳೂರಿನಲ್ಲಿ ಪೂಜಾರಿ ವಿರುದ್ಧ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪಿಸಿ ದೂರು ನೀಡಿದ್ದಾರೆ. ಆರೋಪಿ ಪತ್ತೆಗೆ ಪೊಲೀಸ್ ಶೋಧ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು: ಗರ್ಲ್‌ಫ್ರೆಂಡ್ ಮಾತನಾಡದ ನೋವಿಗೆ 41 ವರ್ಷದ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರುದಲ್ಲಿ ಗರ್ಲ್‌ಫ್ರೆಂಡ್ ಮಾತನಾಡುತ್ತಿಲ್ಲ ಎಂಬ ಬೇಸರದಲ್ಲಿ 41 ವರ್ಷದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ