
ಹೆಬ್ರಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿ ಸುವರ್ಣ ಸಂಭ್ರಮ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ಸ್ವರ್ಣ ಕಿರೀಟದ ಸಮರ್ಪಣೆ ಮತ್ತು ಗಣ ಹೋಮ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ನಂತರ ನಡೆದ ಹೆಬ್ರಿ ಗಣೇಶೋತ್ಸವ ಸುವರ್ಣ ಸಂಭ್ರಮದ ಉದ್ಘಾಟನೆಯನ್ನು ಅನಂತಪದ್ಮನಾಭ ದೇವಳದ ಅರ್ಚಕ ಎಚ್ ಶ್ರೀಕಾಂತ್ ಆಚಾರ್ಯ ಅವರು ನೆರವೇರಿಸಿ ಗಣೇಶೋತ್ಸವದ ಸಮಿತಿಯ ಶಿಸ್ತಿನ ನಿರ್ವಹಣೆ ಮತ್ತು ಊರಿನ ಸಂಘಟನೆ, ದಾನಿಗಳ ಒಗ್ಗಟ್ಟಿನ ಬಲದಿಂದ ಯಶಸ್ವಿಯಾಗಿ ನಡೆಯುತ್ತಿದ್ದು ಸಮಿತಿಗೆ ಶುಭಾಶಯವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾರ್ಧನ್ ಎಚ್ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಚಿತ್ರಕಲಾವಿದ ಮಾ. ವಿನೀಶ್ ಆಚಾರ್ಯ , ಬಿ ಡಿ ಎಸ್ ನಲ್ಲಿ ಚಿನ್ನದ ಪದಕ ವಿಜೇತೆ ಕುಮಾರಿ ಸ್ತುತಿ ಆರ್ ಹೆಗ್ಡೆ , ನೀಟ್ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಹರ್ಷಿತ್ ಶೆಟ್ಟಿ ಕಲ್ಲಿಲ್ಲು ಇವರನ್ನು ಗೌರವಿಸಲಾಯಿತು ಹಾಗೆ ಸುವರ್ಣ ಸಂಸ್ಕರಣೆ ಅಂಗವಾಗಿ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಅನಂತಪದ್ಮನಾಭ ನಾಯಕ್ ಸಂಸ್ಮರಣ ಪ್ರವೇಶ ದ್ವಾರವನ್ನು ಪ್ರಭಾಕರ ನಾಯಕ್ ಉದ್ಘಾಟಿಸಿದರು. ಪ್ರಸನ್ನ ಬಲ್ಲಾಲ್ ಸಂಸ್ಮರಣಾ ವೇದಿಕೆಯನ್ನು ಶ್ರೀಮತಿ ಬಾನು ಪಿ ಬಲ್ಲಾಲ್ ಅವರು ಉದ್ಘಾಟಿಸಿದರು. ರಾಧಾಕೃಷ್ಣ ನಾಯಕ್ ಅನ್ನ ಛತ್ರವನ್ನು ಗೀತಾ ರಾಧಾಕೃಷ್ಣ ನಾಯಕ್ ಇವರು ಉದ್ಘಾಟಿಸಿದರು. ಸುವರ್ಣ ಸಂಸ್ವರಣೆಯ ಗೌರವವನ್ನು 3 ಮಹನೀಯರಿಗೆ ಸಲ್ಲಿಸಲಾಯಿತು.

ಸುವರ್ಣ ಸಂಭ್ರಮದ ಪ್ರಥಮ ದಿನದ ಅನ್ನಸಂತಪಣೆ ದಾನಿಗಳಾದ ದಿ.ಸುಬ್ಬಕ್ಕ ಹೆಗ್ಗಡ್ತಿ ಸ್ಮರಣಾರ್ಥ ಪರವಾಗಿ ಹರಿದಾಸ್ ಹೆಗ್ಡೆ ಮಂಜರಬೆಟ್ಟು ಮತ್ತು ಗೀತಾ ಸುಧಾಕರ್ ಶೆಟ್ಟಿ ಕಿನ್ನಿಗುಡ್ಡೆ ಇವರನ್ನು ಸಮಿತಿಯ ಪರವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರಾದ ತಾರಾನಾಥ್ ಬಲ್ಲಾಳ್ , ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ , ಸೀತಾನದಿ ಸೌಖ್ಯ ಯೋಗಾ ಟ್ರಸ್ಟ್ ನ ಅಧ್ಯಕ್ಷರಾದ ಸೀತಾನದಿ ವಿಠ್ಠಲ್ ಶೆಟ್ಟಿ, ಹೆಬ್ರಿ ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ವಿಜಯ, ಹೆಬ್ರಿ ಚೈತನ್ಯ ಯುವ ವೃಂದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಅಧ್ಯಕ್ಷರಾದ ಶ್ರೀನಿವಾಸ ಬಂಡಾರಿ, ಶಾರದ ಮಹೋತ್ಸವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಬಿ ವೇದಿಕೆಯಲ್ಲಿ ಉಪಸ್ಥಿರಿದ್ದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ್ ಎಚ್ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ವೇದಿಕೆ ಸಮಿತಿ ಸಂಚಾಲಕ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಧನ್ಯವಾದ ಸಲ್ಲಿಸಿದರು.