spot_img

ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ನಿಟ್ಟೆ ಕಾಲೇಜಿನಲ್ಲಿ ‘ಪ್ರತ್ಯಾಹಾರ್’ ಬೀದಿ ನಾಟಕ

Date:

ನಿಟ್ಟೆ: ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತಾಲೀಮ್ ತಂಡ ಹಾಗೂ ಸಿಒಪಿಇ-ಆದಿತ್ಯ ಬಿರ್ಲಾ ಗ್ರೂಪ್ ನ ಎಂಪವರ್ ಜಂಟಿಯಾಗಿ ‘ಪ್ರತ್ಯಾಹಾರ್’ ಎಂಬ 15 ನಿಮಿಷಗಳ ಕಾಲದ ಆತ್ಮಹತ್ಯೆ ತಡೆಗಟ್ಟುವಿಕೆಯ ಬಗೆಗಿನ ಬೀದಿ ನಾಟಕವನ್ನು ಸೆ.10 ರಂದು ಕಾಲೇಜಿನ ಆವರಣದಲ್ಲಿ ಏರ್ಪಡಿಸಿತು. ಈ ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು, ಡೀನ್ ಸ್ಟೂಡೆಂಟ್ ವೆಲ್ಫೇರ್ ಡಾ. ನರಸಿಂಹ ಬೈಲ್ಕೇರಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಥಮ ವರ್ಷದ ಸಂಯೋಜಕ ಡಾ. ಜಾಯ್ ಮಾರ್ಟಿಸ್ ಅತಿಥಿಗಳಾಗಿ ಭಾಗವಹಿಸಿದ್ದರು.

ಈವೆಂಟ್ ನ ಉದ್ದೇಶ: ಆತ್ಮಹತ್ಯೆ ತಡೆಗಟ್ಟುವಿಕೆಯ ಬೀದಿ ನಾಟಕವು ಸ್ಪಷ್ಟ ಮತ್ತು ದೃಢವಾದ ಉದ್ದೇಶವನ್ನು ಹೊಂದಿದ್ದು, ಇದು ಶೈಕ್ಷಣಿಕ ಫಲಿತಾಂಶ ಉತ್ತಮವಾಗಿರದೆ, ಪರೀಕ್ಷಾ ಒತ್ತಡ ಮತ್ತು ವೈಯಕ್ತಿಕ ವಿಚಾರವನ್ನು ಇತರರು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಭಯದ ಪರಿಣಾಮದಿಂದ ಮಾಡಿಕೊಳ್ಳುವ ಆತ್ಮಹತ್ಯೆಯನ್ನು ತಡೆಯಲು ಸಹಕಾರಿಯಾಗಲಿದೆ. ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಪೂರ್ವಭಾವಿಯಾಗಿ ಸಮಾಜದ ಮೂಲಕ ಸಹಾಯ ಹುಡುಕುವ ಮತ್ತು ಬೆಂಬಲಿಸುವ ನಡವಳಿಕೆಗಳನ್ನು ಜನಸಾಮಾನ್ಯರಲ್ಲಿ ಉತ್ತೇಜಿಸುವ ಮೂಲಕ ಆತ್ಮಹತ್ಯೆಯನ್ನು ತಡೆಗಟ್ಟುವುದು ಇದರ ಕೇಂದ್ರ ಉದ್ದೇಶವಾಗಿದೆ.

‘ಪ್ರತ್ಯಾಹಾರ್’ ತನ್ನ ಚಿತ್ರಣಗಳು ಮತ್ತು ಭಾವನಾತ್ಮಕ ವಿಚಾರಗಳಿಂದ ಪ್ರೇಕ್ಷಕರನ್ನು ಮತ್ತು ಹಾಜರಾದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕಾರ್ಯಕ್ರಮವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಕೌನ್ಸಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಕೌನ್ಸೆಲರ್ ಅಂಕಿತ್ ಕುಮಾರ್ ಸಂಯೋಜಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೂಜಾ ಹೆಗ್ಡೆ ಟಾಲಿವುಡ್‌ಗೆ ಕಂಬ್ಯಾಕ್‌: ದುಲ್ಕರ್ ಸಲ್ಮಾನ್ ಜೊತೆ ಹೊಸ ಸಿನಿಮಾ

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಜೊತೆ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಣಜಾರು : ಬೇಟೆಯ ವೇಳೆ ಗುಂಡು ಹಾರಿಸಿದ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಬೇಟೆಯ ವೇಳೆ ಗುಂಡು ಹಾರಿಸಿ ಅದು ಕಾರು ಮತ್ತು ಮನೆಯ ಬಾಗಿಲಿಗೆ ತಗುಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ ಮತ್ತು ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ಗಳಲ್ಲಿ 6 ಪದಕಗಳನ್ನು ಗೆದ್ದ ಹಿರಿಯಡ್ಕದ ಗ್ರೀನ್ ಪಾರ್ಕ್ ಶಾಲಾ ವಿದ್ಯಾರ್ಥಿಗಳು

ಕರಾಟೆ ಕ್ರೀಡೆಯಲ್ಲಿ ಹಿರಿಯಡ್ಕದ ಗ್ರೀನ್ ಪಾರ್ಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ದಿನ ವಿಶೇಷ – ಸರಗರಿ ಯುದ್ಧ

ಸೆಪ್ಟೆಂಬರ್ 12 ರಂದು ನಾವು ಸ್ಮರಿಸುವುದು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಬರೆದುಕೊಂಡ...