ಪಂಚನಬೆಟ್ಟು ಗಣೇಶೋತ್ಸವ ಸಮಿತಿಯಿಂದ ‘ಪ್ಲಾಸ್ಟಿಕ್ ಮುಕ್ತ ಜಾಥ’: ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಕ್ಕೆ ಮಾದರಿ ಕಾರ್ಯಕ್ರಮ

Date:

spot_img

ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಂಚನಬೆಟ್ಟು-2025 ಇದರ ಸಹಯೋಗದಲ್ಲಿ 07/12/2025 ಆದಿತ್ಯವಾರದಂದು ಪೂರ್ವಾಹ್ನ 8 ಗಂಟೆಯಿಂದ 12 ಗಂಟೆಯ ತನಕ ಸ್ವಚ್ಛ ಭಾರತ ಅಭಿಯಾನದಡಿ ಬೊಮ್ಮಾರಬೆಟ್ಟು ಗರಡಿ ಹೋಗುವ ದಾರಿಯಿಂದ ಪಂಚನಬೆಟ್ಟು ಮಾರ್ಗವಾಗಿ ಗುಡ್ಡೆಯಂಗಡಿ ಕ್ರಾಸ್ ತನಕ ರಸ್ತೆಯಲ್ಲಿರುವ “ಪ್ಲಾಸ್ಟಿಕ್ ಮುಕ್ತ ಜಾಥ” ವನ್ನು ಹಮ್ಮಿಕೊಂಡಿದ್ದು ಊರಿನ ಹಿರಿಯರಾದ , ಗಣೇಶೋತ್ಸವ ಸಮಿತಿಯ ಮಾರ್ಗದರ್ಶಕರಾದ ಎಮ್.ವಿಶ್ವನಾಥ ರೈ ಕೊಡಿಬೆಟ್ಟುರವರು ಉದ್ಛಾಟಿಸಿ “ಇವರು ಸ್ವಚ್ಛ ಭಾರತ ಅಭಿಯಾನದಡಿ ಮಾಡುವ ಈ ಒಂದು ಕಾರ್ಯ ನಮ್ಮ ಮನೆಯಲ್ಲಿ ಹೇಗೆ ನಾವು ಸ್ವಚ್ಛತೆಯನ್ನು ಮಾಡುವೆವೋ ಅದೇ ರೀತಿ ಊರಿನಲ್ಲಿ ಕೂಡಾ ಸ್ವಚ್ಛತೆಯನ್ನು ಮಾಡಿಕೊಂಡು ಆರೋಗ್ಯಕರವಾದ ಸಮಾಜವನ್ನು ನಿರ್ಮಿಸುವುದು ಮತ್ತು ಈ ಒಂದು ಸಂದೇಶ ಮನೆ ಮನೆಗೆ ತಲುಪಿ ಅವರ ಮನಪರಿವರ್ತನೆಯಾಗಿ ತಿಳುವಳಿಕೆ ಮೂಡಿ ಸ್ವಸ್ಥ ಸಮಾಜವನ್ನು ರೂಪಿಸುವುದರ ಮೂಲಕ ಎಲ್ಲರಿಗೂ ಶುಭವಾಗಲಿ” ಎಂದು ಹಾರೈಸಿದರು.

ಸಮಿತಿಯ ಪ್ರಧಾನ ಅರ್ಚಕರಾದ ವಾಸುದೇವ ಭಟ್ ನೆಕ್ಕರಪಲ್ಕೆ ಇವರು ಮಾತನಾಡಿ “ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಂಚನಬೆಟ್ಟು 25ನೇ ವರ್ಷದ ರಜತ ಸಂಭ್ರಮದ ಅಂಗವಾಗಿ ಊರಿನ ಯುವಕ-ಯುವತಿಯರು ಸಾರ್ವಜನಿಕರು ಸೇರಿ ಕಸಗಳನ್ನೆಲ್ಲಾ ಒಟ್ಟು ಮಾಡಿ ಸಂಗ್ರಹಿಸಿ ವಿಲೇವಾರಿ ಮಾಡಿ ನಮ್ಮ ಊರನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಿ ಇಡೀ ಗ್ರಾಮಕ್ಕೆ ಮಾದರಿಯಾಗುವ ಮೂಲಕ ಹಾಗೂ ಈ ಒಂದು ಮಹತ್ ಕಾರ್ಯವನ್ನು ಆಯೋಜನೆ ಮಾಡಿದಂತಹ ಸಾರ್ವಜನಿಕ ಗಣೇಶೋತ್ಸವ ಸಮಿತಿಯನ್ನು ಅಭಿನಂದಿಸಿದರು”.

ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಸತೀಶ್ ಶೆಟ್ಟಿಗಾರ್, ಅಧ್ಯಕ್ಷರಾದ ಸಂದೇಶ ಕುಲಾಲ್ , ಉಪಾಧ್ಯಕ್ಷರಾದ ಸಂತೋಷ ಮೂಲ್ಯ, ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಬಿ ಶೆಟ್ಟಿಗಾರ್, ಕೋಶಾಧಿಕಾರಿಗಳಾದ ಶ್ರೀಧರ ಆಚಾರ್ಯ ಮತ್ತು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ರಾಕೇಶ್ , ಶ್ರೀರಾಮ ಭಜನಾ ಮಂಡಳಿ ಪಂಚನಬೆಟ್ಟು ಸದಸ್ಯರು, ಪಂಚನಬೆಟ್ಟು ಸ್ತ್ರೀಶಕ್ತಿ ಸಂಘದ ಸದಸ್ಯರು, ಪಂಚನಬೆಟ್ಟು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು, ಭಸ್ಮೇಶ್ವರಿ ಮರಾಠಿ ಸಂಘ ಸಾಣೆಕಲ್ಲು ಸದಸ್ಯರು, ಸಹಾಯ ಹಸ್ತ(ರಿ) ಮುಂಡುಜೆ ಸದಸ್ಯರು, ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.

ಇಂದಿನ ಸ್ವಚ್ಛತಾ ಕಾರ್ಯಕ್ರಮಕ್ಕೆ ಕೈ ಗ್ಲೌಸ್, ಚೀಲ, ಮಾಸ್ಕ್ ಮತ್ತು ಉಪಹಾರದ ವ್ಯವಸ್ಥೆಯನ್ನು ಎಮ್.ವಿಶ್ವನಾಥ ರೈ ಕೊಡಿಬೆಟ್ಟು ಇವರು ಕೊಡ ಮಾಡಿದರು ಮತ್ತು ಬಿ.ಎಮ್ ಶೇಖರ್ ಸಹಾಯ ಹಸ್ತ(ರಿ) ಮುಂಡುಜೆ, ಶ್ರೀನಾಥ ನಾಯಕ್, ಸತೀಶ್ ನಾಯ್ಕ ಇವರು ತಂಪು ಪಾನೀಯವನ್ನು ನೀಡಿ ಸಹಕರಿಸಿದರು. ಕಸವನ್ನು ಸಂಗ್ರಹಿಸಿ ಒಟ್ಟು ಮಾಡಲು ವಾಹನದ ವ್ಯವಸ್ಥೆಯನ್ನು ಪ್ರತಾಪ್ ನಾಯ್ಕ್ ಮಾಡಿಕೊಟ್ಟರು.ಸಹಕರಿಸಿದಂತಹ ಎಲ್ಲರಿಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಲಕೃಷ್ಣಗೆ ಶೂಟಿಂಗ್ ವೇಳೆ ಅಪಘಾತ: ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ನಟ ಬಾಲಕೃಷ್ಣ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನ ನಾಯಗನ್ ಅಡ್ವಾನ್ಸ್ ಬುಕಿಂಗ್ ದಾಖಲೆ: ವಿಜಯ್ ಚಿತ್ರ ಜುಲೈ 23ಕ್ಕೆ ಬಿಡುಗಡೆ

ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಲಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಂಗಾತಿ ಮೇಲೆ ಆಸಕ್ತಿ ಇಲ್ಲವೆಂದು ಡಿವೋರ್ಸ್ ಸಿಗಲ್ಲ: ಹೈಕೋರ್ಟ್ ಆದೇಶ

ಮದುವೆ ಒಪ್ಪಂದವಲ್ಲ, ಸಂಸ್ಕಾರ. ಹೆಂಡತಿ ಮೇಲೆ ಆಸಕ್ತಿ ಇಲ್ಲವೆಂದು ವಿಚ್ಛೇದನ ಕೇಳಿದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.