ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ, ಕಾರ್ಕಳ ಪ್ರಥಮ, ಹೆಬ್ರಿ ದ್ವಿತೀಯ: ಸ್ವಚ್ಛತೆಯಲ್ಲಿ ರಾಜ್ಯಕ್ಕೆ ಮಾದರಿ

Date:

spot_img

ಕಾರ್ಕಳ: ಕಾರ್ಕಳ ತಾಲೂಕು ರಾಜ್ಯದ ಮೊತ್ತಮೊದಲ ಒಡಿಎಫ್ ಪ್ಲಸ್ (ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ) ತಾಲೂಕಾಗಿ ಘೋಷಣೆಯಾಗಿದೆ. ಹೆಬ್ರಿ ತಾಲೂಕು ದ್ವಿತೀಯ ಸ್ಥಾನ ಪಡೆದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ಧರಿಸಿದ ಶೌಚಾಲಯ ಬಳಕೆ, ತ್ಯಾಜ್ಯ ನಿರ್ವಹಣೆ, ಮತ್ತು ಸ್ವಚ್ಛತಾ ಮಾನದಂಡಗಳನ್ನೆಲ್ಲಾ ಪೂರೈಸುವ ಮೂಲಕ ಕಾರ್ಕಳ 27 ಗ್ರಾಮ ಪಂಚಾಯತ್‌ಗಳ 38 ಗ್ರಾಮಗಳೊಂದಿಗೆ ಮುಂಚೂಣಿಯಲ್ಲಿದೆ. ಹೆಬ್ರಿ 9 ಗ್ರಾಮ ಪಂಚಾಯತ್‌ಗಳ 16 ಗ್ರಾಮಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ.

ಸ್ವಚ್ಛತೆಯಲ್ಲಿ ಮುಂಚೂಣಿಗೆ:
ಬಚ್ಚಲುಮನೆ ಮತ್ತು ಶೌಚಾಲಯ ನೀರು ಪುನರ್‌ಬಳಕೆ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಕುಕ್ಕುಂದೂರಿನಲ್ಲಿ ಮಲ ತ್ಯಾಜ್ಯ ಘಟಕ, ನಿಟ್ಟೆಯಲ್ಲಿ ಎಂಆರ್‌ಎಫ್ ಘಟಕ ಈ ಸಾಧನೆಗೆ ಕಾರಣವಾಗಿದೆ.

ಉಡುಪಿ ಜಿಲ್ಲೆ ಸ್ವಚ್ಛ ಭಾರತ್ ಯೋಜನೆಯಡಿ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಕಳ ಮತ್ತು ಹೆಬ್ರಿ ಒಡಿಎಫ್ ಪ್ಲಸ್ ಪಟ್ಟ ಪಡೆಯುವುದರಲ್ಲಿ ಮುನ್ನಡೆ ಸಾಧಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ -ವಿಶ್ವ ಕೀಟ ದಿನ

ಜೂನ್ 6 ರಂದು ವಿಶ್ವ ಕೀಟ ದಿನವನ್ನು ಏಕೆ ಆಚರಿಸಲಾಗುತ್ತದೆ? ಸಾರ್ವಜನಿಕ ಆರೋಗ್ಯ ಮತ್ತು ರೋಗ ನಿಯಂತ್ರಣದಲ್ಲಿ ಕೀಟ ನಿರ್ವಹಣೆಯ ಮಹತ್ವದ ಮಾಹಿತಿ ಇಲ್ಲಿದೆ.

ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಪರಿಸರ ದಿನದ ಸಡಗರ

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರಂತ ಟ್ರಸ್ಟ್ ಹಾಗೂ 'ನಮ್ಮ ಮನೆ ನಮ್ಮ ಮರ' ತಂಡದ ವತಿಯಿಂದ ನಡೆದ ವನಮಹೋತ್ಸವ ಮತ್ತು ತುಳಸಿ ಗಿಡ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾಂಗ್ರೆಸ್‌ ನಾಯಕರಿಂದ ಪ್ರಚಾರದ ಗೀಳಿಗೆ ನಾನಾ ರೀತಿಯ ಮಾಧ್ಯಮ ಹೇಳಿಕೆ : ನವೀನ್‌ ನಾಯಕ್‌

ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆಗೆ ಶಾಸಕರು ರೂಪಿಸಿದ ಕಾರ್ಯಯೋಜನೆಯ ಶ್ರೇಯಸ್ಸು ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ನವೀನ್ ನಾಯಕ್ ನೀಡಿದ ಹೇಳಿಕೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ನಡೆದ 12 ವರ್ಷಗಳ ಸಾಧನಾ ಅಭಿಯಾನ ಮತ್ತು ಕೃಷಿಕರ ಸನ್ಮಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.