
ಬೆಂಗಳೂರು : ಶಿರೂರು ಮಠದ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ, ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೌರವಪೂರ್ವಕವಾಗಿ ಫಲ ಕಾಣಿಕೆ ಅರ್ಪಿಸಿ ಅವರಿಂದ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷರಾದ ಸಂದೀಪ್ ಕುಮಾರ್ ಮಂಜ ಮತ್ತು ಗೌರವಾಧ್ಯಕ್ಷರಾದ ವೈ. ಸುಧಾಕರ್ ಭಟ್ ಕಾರ್ಕಳ ಅವರು ಶ್ರೀಪಾದರಿಗೆ ಫಲ ಕಾಣಿಕೆ ಸಮರ್ಪಿಸಿದರು. ದಿವಾನರಾದ ಉದಯ್ ಕುಮಾರ್ ಸರಳತ್ತಾಯರು, ಪಿಆರ್‌ಒ ಆದ ಶ್ರೀಶಭಟ್ ಕಡೆಕಾರ್ ಮತ್ತು ಮನೋಹರ್ ರಾವ್ ಪಣಿಯೂರ್ ಉಪಸ್ಥಿತರಿದ್ದರು. ಈ ಭೇಟಿಯು ಶಿರೂರು ಮಠದೊಂದಿಗೆ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನಿಕಟ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ.