ಮುಷ್ಕರದ ನಡುವೆಯೂ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯವಿಲ್ಲ! – ತೈಲ ಕಂಪನಿಗಳ ಭರವಸೆ

Date:

spot_img

ಚೆನ್ನೈ: ಬೃಹತ್ ಎಲ್‌ಪಿಜಿ ಸಾರಿಗೆದಾರರ ಮುಷ್ಕರದ ನಡುವೆ, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ತಮ್ಮ ಗ್ರಾಹಕರಿಗೆ ನಿರಂತರ ಎಲ್‌ಪಿಜಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿವೆ. ತೈಲ ಕಂಪನಿಗಳು ಬಾಟ್ಲಿಂಗ್ ಪ್ಲಾಂಟ್‌ಗಳಲ್ಲಿ ಸಾಕಷ್ಟು ಸ್ಟಾಕ್ ಹೊಂದಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಸಾರ್ವಜನಿಕರಿಗೆ ಮನವಿ ಮಾಡಿದೆ.

ಮುಷ್ಕರದ ನಡುವೆಯೂ ನಿರಂತರ ಪೂರೈಕೆ!
ಸಾರಿಗೆ ಮಾಲೀಕರ ಪ್ರಮುಖ ಬೇಡಿಕೆಗಳ ಬಗ್ಗೆ ಒಎಂಸಿಗಳು ಸಭೆ ನಡೆಸಿ, ಸೂಕ್ತ ಸ್ಪಷ್ಟೀಕರಣ ನೀಡಿದರೂ, ಸಾರಿಗೆದಾರರ ಒಂದು ವಿಭಾಗವು ಮುಷ್ಕರಕ್ಕೆ ಕರೆ ನೀಡಿದೆ. ಪ್ರಾಥಮಿಕವಾಗಿ ಸುರಕ್ಷತಾ ಉಲ್ಲಂಘನೆಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ದಂಡದ ಷರತ್ತುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ಸುರಕ್ಷತೆಗೆ ಪ್ರಥಮ ಆದ್ಯತೆ!
ಎಲ್‌ಪಿಜಿ ಸಾಗಣೆಯ ನಿರ್ವಹಣೆ, ಪೆಸೊ, ಪಿಎನ್‌ಜಿಆರ್‌ಬಿ ಮತ್ತು ಒಐಎಸ್‌ಡಿ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದ್ದು, ಒಟ್ಟಾರೆಯಾಗಿ ಇದು ಪಾಲುದಾರರು, ಟ್ಯಾಂಕರ್ ಮಾಲೀಕರು, ಚಾಲಕರು ಮತ್ತು ಗ್ರಾಹಕರ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ.

ಸಾರ್ವಜನಿಕರಿಗೆ ಆತಂಕ ಬೇಡ !
ತೈಲ ಕಂಪನಿಗಳು ಪ್ರಮುಖ ಸಾರಿಗೆದಾರರೊಂದಿಗೆ ಮಾತುಕತೆ ಮುಂದುವರಿಸಿಕೊಂಡು ಸಮಸ್ಯೆ ಇತ್ಯರ್ಥಕ್ಕೆ ತ್ವರಿತ ಕ್ರಮ ತೆಗೆದುಕೊಳ್ಳುತ್ತಿವೆ. “ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಇಂಡಿಯನ್ ಆಯಿಲ್ ದಕ್ಷಿಣ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಕ್ರಮ: ದೆಹಲಿಯಲ್ಲಿ ಬೃಹತ್ ಪ್ರತಿಭಟನೆ, ರಾಹುಲ್ ಗಾಂಧಿಗೆ ಗಾಯ

ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳ ಬೃಹತ್ ಪ್ರತಿಭಟನೆ. ರಾಹುಲ್ ಗಾಂಧಿಗೆ ಗಾಯ, ಹಲವು ನಾಯಕರ ವಶ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಹಣ ಬರದೆ ಬೇಸತ್ತ ಪತಿ ಪ್ರತಿಭಟನೆ: ಸಿಎಂಗೆ ಪತ್ರ

ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗದೆ ಕೊಪ್ಪಳದಲ್ಲಿ ಪತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮಿತಾಬ್ ಬಚ್ಚನ್ ಆರೋಗ್ಯ ಕುರಿತ ವದಂತಿಗಳಿಗೆ ತೆರೆ! ಬಿಗ್ ಬಿ ಸ್ಪಷ್ಟನೆ

ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಕುರಿತು ಹಬ್ಬಿದ್ದ ಶಸ್ತ್ರಚಿಕಿತ್ಸೆಯ ವದಂತಿಗಳಿಗೆ ನಟ ಸ್ವತಃ ತೆರೆ ಎಳೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ