
ಚೆನ್ನೈ: ಬೃಹತ್ ಎಲ್‌ಪಿಜಿ ಸಾರಿಗೆದಾರರ ಮುಷ್ಕರದ ನಡುವೆ, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ತಮ್ಮ ಗ್ರಾಹಕರಿಗೆ ನಿರಂತರ ಎಲ್‌ಪಿಜಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿವೆ. ತೈಲ ಕಂಪನಿಗಳು ಬಾಟ್ಲಿಂಗ್ ಪ್ಲಾಂಟ್‌ಗಳಲ್ಲಿ ಸಾಕಷ್ಟು ಸ್ಟಾಕ್ ಹೊಂದಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಸಾರ್ವಜನಿಕರಿಗೆ ಮನವಿ ಮಾಡಿದೆ.
ಮುಷ್ಕರದ ನಡುವೆಯೂ ನಿರಂತರ ಪೂರೈಕೆ!
ಸಾರಿಗೆ ಮಾಲೀಕರ ಪ್ರಮುಖ ಬೇಡಿಕೆಗಳ ಬಗ್ಗೆ ಒಎಂಸಿಗಳು ಸಭೆ ನಡೆಸಿ, ಸೂಕ್ತ ಸ್ಪಷ್ಟೀಕರಣ ನೀಡಿದರೂ, ಸಾರಿಗೆದಾರರ ಒಂದು ವಿಭಾಗವು ಮುಷ್ಕರಕ್ಕೆ ಕರೆ ನೀಡಿದೆ. ಪ್ರಾಥಮಿಕವಾಗಿ ಸುರಕ್ಷತಾ ಉಲ್ಲಂಘನೆಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ದಂಡದ ಷರತ್ತುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಸುರಕ್ಷತೆಗೆ ಪ್ರಥಮ ಆದ್ಯತೆ!
ಎಲ್‌ಪಿಜಿ ಸಾಗಣೆಯ ನಿರ್ವಹಣೆ, ಪೆಸೊ, ಪಿಎನ್‌ಜಿಆರ್‌ಬಿ ಮತ್ತು ಒಐಎಸ್‌ಡಿ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದ್ದು, ಒಟ್ಟಾರೆಯಾಗಿ ಇದು ಪಾಲುದಾರರು, ಟ್ಯಾಂಕರ್ ಮಾಲೀಕರು, ಚಾಲಕರು ಮತ್ತು ಗ್ರಾಹಕರ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ.
ಸಾರ್ವಜನಿಕರಿಗೆ ಆತಂಕ ಬೇಡ !
ತೈಲ ಕಂಪನಿಗಳು ಪ್ರಮುಖ ಸಾರಿಗೆದಾರರೊಂದಿಗೆ ಮಾತುಕತೆ ಮುಂದುವರಿಸಿಕೊಂಡು ಸಮಸ್ಯೆ ಇತ್ಯರ್ಥಕ್ಕೆ ತ್ವರಿತ ಕ್ರಮ ತೆಗೆದುಕೊಳ್ಳುತ್ತಿವೆ. “ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಇಂಡಿಯನ್ ಆಯಿಲ್ ದಕ್ಷಿಣ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.