ನಿಪ್ಪಾಣಿ ಭೀಮ ಹೆಜ್ಜೆ ಶತಮಾನ ಸಂಭ್ರಮಕ್ಕೆ ಚಾಲನೆ: ಬಿಜೆಪಿ ಬೈಕ್ ರ್ಯಾಲಿ

Date:

spot_img

ಬೆಂಗಳೂರು:ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಆಗಮಿಸಿ ನೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ, ‘ಭೀಮ ಹೆಜ್ಜೆ ಶತಮಾನ ಸಂಭ್ರಮ’ ಬೈಕ್ ರ್ಯಾಲಿಗೆ ಇಂದು ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಡಾ. ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್‌ನ ಮನೋಭಾವನೆ ತಿರಸ್ಕಾರದ್ದಾಗಿದೆ. ನಿಪ್ಪಾಣಿಗೆ ಅಂಬೇಡ್ಕರ್ ಬಂದು ನೂರು ವರ್ಷ ಕಳೆದರೂ, ತಮ್ಮನ್ನು ದಲಿತರ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೆಸ್‌ನಿಂದ ಈ ಕುರಿತು ಒಬ್ಬ ನಾಯಕರೂ ಮಾತು ಹೇಳಿಲ್ಲ” ಎಂದು ಟೀಕಿಸಿದರು.

ಅಂಬೇಡ್ಕರ್ ಗೆದ್ದ ಹಿಂದೂ ಬಾಹುಳ್ಯ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ನಿಲುವು ಕಾಂಗ್ರೆಸ್‌ನದ್ದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವಿರುದ್ಧ 1952 ಮತ್ತು 1954ರ ಚುನಾವಣೆಯಲ್ಲಿ ತಂತ್ರ ರೂಪಿಸಿ ಸೋಲಿಸಲು ನೋಡಿದ ಘಟನೆಗಳನ್ನೂ ಅವರು ಉಲ್ಲೇಖಿಸಿದರು.

ಅಲ್ಲದೆ, “ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ನೀಡಲಿಲ್ಲ, ಸಂಸತ್ ಭವನದಲ್ಲಿ ಅವರ ತೈಲಚಿತ್ರ ಅನಾವರಣಕ್ಕೂ ಅವಕಾಶ ನೀಡಲಿಲ್ಲ” ಎಂಬ ಆರೋಪವನ್ನೂ ಪ್ರಹ್ಲಾದ ಜೋಶಿ ಮಾಡಿದರು.

ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಪಕ್ಷದ ಸಭೆಯಲ್ಲಿ ಕುರ್ಚಿ ನೀಡದೆ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ದಲಿತ ವಿರೋಧಿ ಮನಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್. ಅಶೋಕ್, “ದಲಿತರ ತುಳಿತದ ಹಿಂದೆ ಕಾಂಗ್ರೆಸ್‌ನ ಬೃಹತ್ ಇತಿಹಾಸವಿದೆ” ಎಂದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹಾಜರಿದ್ದರು.

ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ ಸಮಾರೋಪ:

ಏಪ್ರಿಲ್ 15ರಂದು ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಬೈಕ್ ರ್ಯಾಲಿ ತಂಡಗಳು ನಿಪ್ಪಾಣಿ ಮಾರ್ಗವಾಗಿ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ದಾಮೋದರ್ ಹರಿ ಚಾಪೇಕರ್ ಜನ್ಮದಿನ

ಭಾರತದ ವೀರ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರ ಜನ್ಮದಿನದ ಮಹತ್ವ ಮತ್ತು ಬ್ರಿಟಿಷ್ ಅಧಿಕಾರಿ ರಾಂಡ್ ಹತ್ಯೆಯ ಐತಿಹಾಸಿಕ ಹೋರಾಟದ ಹಿನ್ನೆಲೆ ಇಲ್ಲಿದೆ.

6,000mAh ಬ್ಯಾಟರಿ, 6 ವರ್ಷಗಳ ಅಪ್‌ಡೇಟ್: ಭಾರತಕ್ಕೆ ಲಗ್ಗೆ ಇಡಲಿದೆ ಸ್ಯಾಮ್‌ಸಂಗ್‌ನ ಹೊಸ ಗೇಮ್ ಚೇಂಜರ್ ಫೋನ್

ಸ್ಯಾಮ್‌ಸಂಗ್ ಜೂನ್ 29 ರಂದು ತನ್ನ ಹೊಸ ಗ್ಯಾಲಕ್ಸಿ M47 5G ಫೋನ್ ಅನ್ನು ಬಲಿಷ್ಠ ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ.

ದಪ್ಪ ಮೆಣಸಿನಕಾಯಿ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸೂಪರ್ ಫುಡ್! ಇದರ ಸೀಕ್ರೆಟ್ಸ್ ಇಲ್ಲಿದೆ ನೋಡಿ…

ದಿನನಿತ್ಯದ ಆಹಾರದಲ್ಲಿ ಕ್ಯಾಪ್ಸಿಕಂ ಬಳಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಮತ್ತು ತೂಕ ಇಳಿಕೆಗೆ ಇದು ಹೇಗೆ ಸಹಕಾರಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾಭಾರತಿ ಉಡುಪಿ ಜಿಲ್ಲಾ ಕ್ರೀಡಾಕೂಟ ಸಿದ್ಧತಾ ಸಭೆ

ಉಡುಪಿ ಜಿಲ್ಲಾಮಟ್ಟದ ವಿದ್ಯಾಭಾರತಿ ಕ್ರೀಡಾಕೂಟದ ದಿನಾಂಕಗಳು ಮತ್ತು ವೇಳಾಪಟ್ಟಿ ಪ್ರಕಟಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.