
ಹಾಸನ : ನವವಿವಾಹಿತೆಯೊಬ್ಬರ ಶವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರೈಲ್ವೆ ಹಳಿ ಮೇಲೆ ಪತ್ತೆಯಾದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ವಿದ್ಯಾ (24) ಮೃತಪಟ್ಟ ದುರ್ದೈವಿ.
ವಿದ್ಯಾ ಹಾಗೂ ಸೋಮಲಾಪುರ ಗ್ರಾಮದ ಶಿವು ಆರು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿದ್ಯಾ ಪತಿ ಶಿವು ಬೆಂಗಳೂರಿನ ಶಂಕರಿಪುರಂನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು . ಇಬ್ಬರೂ ಕೂಡಾ ಇದೇ ಪ್ರದೇಶದಲ್ಲಿ ವಾಸವಿದ್ದರು. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾ ಶವವಾಗಿ ಇಂದು ಅರಸೀಕೆರೆ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದ್ದಾರೆ.
ಇದು ಕೇವಲ ಆತ್ಮಹತ್ಯೆಯಲ್ಲ, ಪತಿಯ ಕುಟುಂಬದಿಂದಲೇ ಹತ್ಯೆ ನಡೆದಿರುವುದಾಗಿ ವಿದ್ಯಾ ತಂದೆ-ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.