
ಉಡುಪಿ : ಉಡುಪಿ ತಾಲೂಕು ಹಿರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪಡುಭಾಗ, ಪಡ್ಡಾಂದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿರುವುದು.

ವರ್ಷಂಪ್ರತಿ ಜರಗುವ ನವರಾತ್ರಿ ಮಹೋತ್ಸವಕ್ಕೆ ಭಕ್ತಾಭಿಮಾನಿಗಳೆಲ್ಲರೂ ತನು-ಮನ-ಧನಗಳಿಂದ ಸಹಕರಿಸಿ, ದೇವಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ಆಗಮಿಸಿ, ಶ್ರೀದೇವಿಯ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮೋಹನದಾಸ ಶೆಟ್ಟಿ ಪಡುಭಾಗ-ಕಾಪ್ಯಾಡಿ, ಪ್ರಧಾನ ಅರ್ಚಕರಾದ ಲಕ್ಷ್ಮಣ ನಾಯ್ಕ ಗದ್ದಿಗೆ, ಅಧ್ಯಕ್ಷರಾದ ಸುರೇಶ್ ಪೂಜಾರಿ ಕಾಜಾರಗುತ್ತು ಮತ್ತು ಸರ್ವ ಸದಸ್ಯರು , ಭಜನಾ ಮಂಡಳಿ ಹಾಗೂ ಊರ ಗ್ರಾಮಸ್ಥರು ಕೋರಿದ್ದಾರೆ.
ಅಕ್ಟೋಬರ್ 2ರಂದು ಚಂಡಿಕಾಯಾಗ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಲಿರುವುದು.