ಶ್ರೀ ಮೂಕಾಂಬಿಕೆಗೆ ನವರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ: 45 ವರ್ಷದ ಕನಸು ನನಸಾದ ಕ್ಷಣ

Date:

spot_img

ಕೊಲ್ಲೂರು : ದೇವಿಯ ಅನುಗ್ರಹದ ಕನಸಿಗೆ ನೈಜ ರೂಪ ನೀಡಿದ ಭಕ್ತರು, ಸುಮಾರು ₹90 ಲಕ್ಷ ಮೌಲ್ಯದ ನವರತ್ನ ಕಲ್ಲುಗಳೊಂದಿಗೆ ಅಲಂಕೃತವಾದ 1 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಬುಧವಾರ ಶ್ರೀ ಮೂಕಾಂಬಿಕಾ ದೇವಿಗೆ ಸಮರ್ಪಿಸಿದ್ದಾರೆ.

ಈ ಪವಿತ್ರ ಸೇವೆಯನ್ನು ತುಮಕೂರು ಜಿಲ್ಲೆಯ ಶಿರಾದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ| ಕೆ. ಲಕ್ಷ್ಮೀನಾರಾಯಣ ಅವರ ಕುಟುಂಬವಿಂದು ನೀಡಿದ್ದು , ಅವರು 45 ವರ್ಷಗಳ ಹಿಂದೆಯೇ ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಲು ಸಂಕಲ್ಪ ಮಾಡಿಕೊಂಡಿದ್ದರು. ಆ ಸಂಕಲ್ಪ ಇಂದು ಸಂಪೂರ್ಣಗೊಂಡಿದೆ.

ಬುಧವಾರ ಬೆಳಿಗ್ಗೆ ರಥಬೀದಿಯಿಂದ ವಾದ್ಯಘೋಷದೊಂದಿಗೆ ಶೋಭಾ ಯಾತ್ರೆಯ ರೂಪದಲ್ಲಿ ಚಿನ್ನದ ಮುಖವಾಡವನ್ನು ದೇಗುಲದ ಆವರಣಕ್ಕೆ ತಂದು, ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್ ಮತ್ತು ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ದೇವಿಗೆ ಅರ್ಪಿಸಲಾಯಿತು.

ಈ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಸುಧಾ ಹಾಗೂ ಇತರ ಗಣ್ಯರು ಹಾಜರಿದ್ದರು.

ಈಚೆಗೆ ಜೂನ್ 10ರಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬಾ ದೇವಸ್ಥಾನದಲ್ಲಿ ಈ ಮುಖವಾಡಕ್ಕೆ ಪೂರ್ವ ಪೂಜೆ ನೆರವೇರಿಸಲಾಗಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಹ್ಯಾಕಾಶದಲ್ಲಿ ವಿಸ್ಮಯ: ಸೌರಮಂಡಲದ ಆಚೆ ಪತ್ತೆಯಾಯ್ತು ‘ಪಿಂಕ್ ಪ್ಲಾನೆಟ್’.. ಉಪ್ಪಿನ ಮೋಡಗಳ ಕಂಡು ವಿಜ್ಞಾನಿಗಳೇ ಶಾಕ್!

ಜೇಮ್ಸ್ ವೆಬ್ ಟೆಲಿಸ್ಕೋಪ್ ಮಹತ್ವದ ಸಾಧನೆ! 57 ಜ್ಯೋತಿರ್ವರ್ಷ ದೂರದ 'ಗುಲಾಬಿ ಗ್ರಹ' GJ 504b ವಾತಾವರಣದಲ್ಲಿ ಉಪ್ಪಿನ ಮೋಡಗಳು ಪತ್ತೆ.

ಉಡುಪಿ: ಸೈಬರ್ ವಂಚನೆಗೆ ಹಿರಿಯ ಮಹಿಳೆ ಬಲಿ, 65 ಲಕ್ಷ ರೂ. ಲೂಟಿ!

ಉಡುಪಿಯಲ್ಲಿ ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿ ಹಿರಿಯ ಮಹಿಳೆಗೆ 65 ಲಕ್ಷ ರೂ. ವಂಚಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ: ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಪವಾಸದ ಬೆಸ್ಟ್ ಫುಡ್ ‘ರಾಜಗೀರಾ’: ತೂಕ ಇಳಿಸೋಕೆ ಇಷ್ಟೊಂದು ಹೆಲ್ಪ್ ಮಾಡುತ್ತಾ ಈ ದೇವಬೀಜ

ಉಪವಾಸಕ್ಕೆ ಬಳಸುವ ರಾಜಗೀರಾ ಬೀಜಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ತೂಕ ಇಳಿಸಲು ಮತ್ತು ಮೂಳೆಗಳ ಬಲಕ್ಕೆ ಈ ಗ್ಲುಟನ್ ಮುಕ್ತ ಸೂಪರ್‌ಫುಡ್ ಸೇವಿಸಿ.