
ಮುಂಬೈ: ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಮುಂಬರುವ ಹೈ- ಆಕ್ಷನ್ ಎಂಟರ್‌ಟೈನರ್ ‘AA22XA6’ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
‘AA22XA6’ ಚಿತ್ರದಲ್ಲಿ ಈಗಾಗಲೇ ದೀಪಿಕಾ ಪಡುಕೋಣೆ ಮತ್ತು ಮೃಣಾಲ್ ಠಾಕೂರ್ ಅವರಂತಹ ತಾರೆಯರು ಇರುವುದರಿಂದ, ರಶ್ಮಿಕಾ ಅವರ ಈ ನಿರ್ಧಾರ ಅವರ ವೃತ್ತಿ ಜೀವನದಲ್ಲಿ ಮಹತ್ವದ ತಿರುವನ್ನು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಯಕಿಯರು ನೆಗೆಟಿವ್ ಪಾತ್ರಗಳನ್ನು ಮಾಡಿದರೆ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಕೇವಲ ನಂಬಿಕೆ ಅಷ್ಟೇ. ಈ ಹಿಂದೆ ನಟಿ ರಮ್ಯಾ ಕೃಷ್ಣ ಅವರು ‘ನೀಲಾಂಬರಿ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿ ವಿಮರ್ಶಕರ ಪ್ರಶಂಸೆ ಗಳಿಸಿದ್ದರು. ಇದೀಗ ರಶ್ಮಿಕಾ ಅವರಿಗೂ ಅಂಥದ್ದೇ ಒಂದು ಅವಕಾಶ ಒಲಿದು ಬಂದಿದೆ.
ಇತ್ತೀಚೆಗೆ ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾಗಳನ್ನು ಒಪ್ಪಿಕೊಂಡು ಗಮನ ಸೆಳೆದಿರುವ ರಶ್ಮಿಕಾ, ಈ ವಿಲನ್ ಪಾತ್ರದ ಮೂಲಕ ತಮ್ಮ ನಟನೆಯ ಹೊಸ ಆಯಾಮಗಳನ್ನು ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ.