
ಅಜೆಕಾರು: ದಿನಾಂಕ 2025 ಏಪ್ರಿಲ್ 14ರಿಂದ 19ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಳದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ಶ್ರೀ ಮನ್ಮಹಾರಥೋತ್ಸವದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ.
ಕೊರಂಗ್ರಪಾಡಿಯ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಉತ್ಸವ ಕಾರ್ಯಕ್ರಮಗಳು ನಡಯಲಿದ್ದು,ದಿನಾಂಕ 16 ಏಪ್ರಿಲ್ 2025 ರಂದು ಶ್ರೀ ಮನ್ಮಹಾರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಭಕ್ತಾಭಿಮಾನಿಗಳು ಈ ಪವಿತ್ರ ಉತ್ಸವದಲ್ಲಿ ತನು-ಮನ-ಧನಗಳಿಂದ ಸಹಕರಿಸಿ, ನಿತ್ಯಪೂಜೆ ಹಾಗೂ ವಿಶೇಷ ಸೇವೆಗಳಲ್ಲಿ ಬಂಧು-ಮಿತ್ರರೊಡಗೂಡಿ ಆಗಮಿಸಿ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿವರಾಮ ಜಿ. ಶೆಟ್ಟಿ (ಅಧ್ಯಕ್ಷರು, ಉತ್ಸವ ಸಮಿತಿ), ಶ್ರೀ ಪ್ರಮೋದ್ ಸುವರ್ಣ (ಆಡಳಿತಾಧಿಕಾರಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ), ಶ್ರೀ ಕೃಷ್ಣಮೂರ್ತಿ ಭಟ್ (ಅರ್ಚಕರು) ಮತ್ತು ಮರ್ಣೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಷಯ ಸೂಚಿ : ರಥಯಾತ್ರಾ ಮಹೋತ್ಸವದ ನೇರಪ್ರಸಾರವನ್ನು ವೀಕ್ಷಿಸಲು ನಮ್ಮ NP NEWS ಯೂ ಟ್ಯೂಬ್ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ
🔗link given below👇