ಕೃಷಿಗೆ ಸಂಬಂಧಿಸಿದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ – ಶೆಡ್ ನಿರ್ಮಾಣಕ್ಕೆ ಸಹಾಯಧನ

Date:

spot_img

ಬೆಂಗಳೂರು: ಭಾರತದಲ್ಲಿ ರೈತರಿಗೆ ಕೃಷಿ ಸಂಬಳದ ಮೇಲೆ ಅವಲಂಬನೆ ಹೊಂದಿರುವುದರಿಂದ ಸರ್ಕಾರವು ವಿವಿಧ ಯೋಜನೆಗಳನ್ನು ಆರಂಭಿಸಿದೆ. ಕೃಷಿಯಲ್ಲಿ ಹೆಚ್ಚಿನ ಆರ್ಥಿಕ ಪ್ರಗತಿಗಾಗಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರಿಗೆ ಶೆಡ್ ನಿರ್ಮಾಣಕ್ಕಾಗಿ ರೂ. 58,000 ರಷ್ಟು ಸಹಾಯಧನ ನೀಡಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ, ರೈತರು ಕುರಿ ಕೋಳಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ ಅಥವಾ ಮೀನುಗಾರಿಕೆಗೆ ತೊಡಗಿಸಿಕೊಂಡು ತಮ್ಮ ಸ್ವಂತ ಕೃಷಿ ಭೂಮಿಯಲ್ಲಿ ಶೆಡ್ ನಿರ್ಮಿಸಲು ಸಹಾಯಧನವನ್ನು ಪಡೆಯಬಹುದು.

ಅರ್ಹತೆಯ ನಿಯಮಗಳು:

  1. ಕರ್ನಾಟಕ ರಾಜ್ಯದ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  2. ಅರ್ಜಿದಾರರಿಗೆ ಶೆಡ್ ನಿರ್ಮಾಣಕ್ಕೆ ಸ್ವಂತ ಕೃಷಿ ಭೂಮಿ ಇರಬೇಕು, ಮತ್ತು ಕುರಿ, ಕೋಳಿ, ಹೈನುಗಾರಿಕೆ ಅಥವಾ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರಬೇಕು.
  3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಹೆಚ್ಚಿನ ಆದ್ಯತೆ.
  4. ಪಶು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯುವುದು.

ಶೆಡ್ ನಿರ್ಮಾಣದ ನಿಯಮಗಳು:

  1. ಶೆಡ್ 10 ಅಡಿ ಅಗಲ ಮತ್ತು 18 ಅಡಿಗಳ ಗೋಡೆ ಇರಬೇಕು.
  2. 5 ಅಡಿ ಎತ್ತರದ ಗೋಡೆಯು, ಗೋದಲಿ ಅಥವಾ ಮೇವು ತೊಟ್ಟಿಯು ಇರಬೇಕು.
  3. ಜಾನುವಾರುಗಳ ಉಸಿರಾಟಕ್ಕೆ ಗಾಳಿ ಮತ್ತು ಬೆಳಕಿಗಾಗಿ ಶೆಡ್ ಗಳನ್ನು ನಿರ್ಮಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

  1. ಅರ್ಜಿದಾರರು ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿ ಹತ್ತಿರದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು.
  2. ಅರ್ಜಿಯನ್ನು ಪರಿಶೀಲಿಸಿ ವಾರ್ಷಿಕ ಕ್ರಿಯಾ ಯೋಜನೆಗೆ ಸೇರಿಸಲಾಗುತ್ತದೆ.
  3. ಹಣವು DBT ಮೂಲಕ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
  4. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ.

ಬೇಕಾದ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ವಿವರ
  • ಶೆಡ್ ನಿರ್ಮಾಣದ ಸ್ಥಳದ ದಾಖಲೆಗಳು
  • ಜಾನುವಾರುಗಳಿಗೆ ಪಡೆದ ವೈದ್ಯಕೀಯ ದೃಢೀಕರಣ ಪತ್ರ
  • ನಿಗದಿತ ಅರ್ಜಿ ಫಾರಂ
  • ಇತರೆ ಪ್ರಮುಖ ದಾಖಲೆಗಳು

ಈ ಯೋಜನೆ ರೈತರಿಗೆ ಹೆಚ್ಚಿನ ಆದಾಯವನ್ನೂ, ಆರ್ಥಿಕ ಸ್ಥಿರತೆಯನ್ನೂ ತರುತ್ತದೆ, ಮತ್ತು ಇದರ ಲಾಭವನ್ನು ರೈತರು ಪಡೆದು ಕೊಳ್ಳಬಹುದಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ -ವಿಶ್ವ ಕೀಟ ದಿನ

ಜೂನ್ 6 ರಂದು ವಿಶ್ವ ಕೀಟ ದಿನವನ್ನು ಏಕೆ ಆಚರಿಸಲಾಗುತ್ತದೆ? ಸಾರ್ವಜನಿಕ ಆರೋಗ್ಯ ಮತ್ತು ರೋಗ ನಿಯಂತ್ರಣದಲ್ಲಿ ಕೀಟ ನಿರ್ವಹಣೆಯ ಮಹತ್ವದ ಮಾಹಿತಿ ಇಲ್ಲಿದೆ.

ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಪರಿಸರ ದಿನದ ಸಡಗರ

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರಂತ ಟ್ರಸ್ಟ್ ಹಾಗೂ 'ನಮ್ಮ ಮನೆ ನಮ್ಮ ಮರ' ತಂಡದ ವತಿಯಿಂದ ನಡೆದ ವನಮಹೋತ್ಸವ ಮತ್ತು ತುಳಸಿ ಗಿಡ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾಂಗ್ರೆಸ್‌ ನಾಯಕರಿಂದ ಪ್ರಚಾರದ ಗೀಳಿಗೆ ನಾನಾ ರೀತಿಯ ಮಾಧ್ಯಮ ಹೇಳಿಕೆ : ನವೀನ್‌ ನಾಯಕ್‌

ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆಗೆ ಶಾಸಕರು ರೂಪಿಸಿದ ಕಾರ್ಯಯೋಜನೆಯ ಶ್ರೇಯಸ್ಸು ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ನವೀನ್ ನಾಯಕ್ ನೀಡಿದ ಹೇಳಿಕೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ನಡೆದ 12 ವರ್ಷಗಳ ಸಾಧನಾ ಅಭಿಯಾನ ಮತ್ತು ಕೃಷಿಕರ ಸನ್ಮಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.