
ನವದೆಹಲಿ : ಎಲ್‌ಪಿಜಿ ಬಳಕೆದಾರರಿಗೆ ಜುಲೈ ತಿಂಗಳಲ್ಲಿ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿವೆ. ವಾಣಿಜ್ಯ ಬಳಕೆಗೆ ಇರುವ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ₹58.50 ರಷ್ಟು ಇಳಿಸಲಾಗಿದೆ. ಹೊಸ ದರಗಳು ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.
ವಾಣಿಜ್ಯ ಸಿಲಿಂಡರ್‌ಗಳ ದರ ಈ ಕೆಳಗಿನಂತೆ ಇಳಿಕೆಯಾಗಿದೆ:
- ದೆಹಲಿ: ₹1723.50 → ₹1665.00
- ಕೋಲ್ಕತ್ತಾ: ₹1826.00 → ₹1769.00
- ಮುಂಬೈ: ₹1674.50 → ₹1616.00
- ಚೆನ್ನೈ: ₹1823.50 → ₹1765.50
- ಬೆಂಗಳೂರು: ₹1746.00 → ₹1687.50
ಇದೊಂದು ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳಿಗೆ ನಿರೀಕ್ಷಿತದಂತ ಧನಾತ್ಮಕ ಬೆಳವಣಿಗೆಯಾಗಿದೆ. ಆದರೆ, ಸಾಮಾನ್ಯ ಗ್ರಾಹಕರಿಗೆ ಉಪಯೋಗವಾಗುವ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನದಂತೆ ಇದೇ ದರ ಮುಂದುವರೆಯಲಿದೆ.
ಪ್ರತಿಯೊಂದು ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಕರೆನ್ಸಿ ವಿನಿಮಯ ದರಗಳ ಆಧಾರದಲ್ಲಿ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.