
ಉಡುಪಿ : ಕರೆದಲ್ಲಿಗೆ ಅಕ್ಕರೆಯಿಂದ ಆಗಮಿಸುವ ನಮ್ಮ ಹೆಮ್ಮೆಯ ಸಂಸದ ಸರಳ ಸಜ್ಜನರಾದ ಮಾನ್ಯ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರು ಉಡುಪಿ ಮೂಡುಬೆಟ್ಟಿನಲ್ಲಿರುವ ಶ್ರೀ ಕೃಷ್ಣ ವೃದ್ಧರ ಆಶ್ರಯಧಾಮಕ್ಕೆ ಅಕ್ಟೋಬರ್ 2 ರಂದು ಭೇಟಿ ನೀಡಿ ಆಶ್ರಮದ ಸ್ವಚ್ಛತೆ ಸೌಕರ್ಯವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಆಶ್ರಮದ ಎಲ್ಲಾ ವಯೋವೃದ್ಧರ ಯೋಗ ಕ್ಷೇಮವನ್ನು ವಿಚಾರಿಸಿ ವಾಸಿಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಆಶ್ರಮದ ಮುಖ್ಯ ಸಂಚಾಲಕರಾದ ಶ್ರೀ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರು ಸಂಸದರನ್ನು ಆತ್ಮೀಯವಾಗಿ ಸ್ವಾಗತಿಸಿ ಆಶ್ರಮದ ನಿವಾಸಿಗಳನ್ನು ಪರಿಚಯಿಸಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಈ ಸಂದರ್ಭದಲ್ಲಿ ಮಾನ್ಯ ನಗರಸಭಾ ಸದಸ್ಯರಾದ ಶ್ರೀ ಶ್ರೀಶ ಕೊಡವೂರು ಅವರ ಜೊತೆಗಿದ್ದರು. ಮಾನ್ಯ ಸಂಸದರು ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರನ್ನು ಅಭಿನಂದಿಸಿ ತನ್ನಿಂದ ಸಾಧ್ಯವಾಗುವ ಎಲ್ಲಾ ನೆರವುಗಳನ್ನು ನೀಡುವುದಾಗಿ ಭರವಸೆಯನ್ನಿತ್ತರು.