spot_img

ಕಾರ್ಕಳ ಯುವ ಬ್ರಾಹ್ಮಣ ಪರಿಷತ್‌ನಿಂದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

Date:

spot_img

ಕಾರ್ಕಳ : ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ ಕಾರ್ಕಳ ಇದರ ವತಿಯಿಂದ ದಿನಾಂಕ 17.08.2025 ನೇ ಭಾನುವಾರ ಸಾಯಂಕಾಲ ಕಾರ್ಕಳ ಶ್ರೀ ಸೂರ್ಯನಾರಾಯಣ ಮಠದಲ್ಲಿ ನಡೆದಂತಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳಾದ ಕೃಷ್ಣ ವೇಷ ಸ್ಪರ್ಧೆ, ಭಕ್ತಿಗೀತೆ, ರಸಪ್ರಶ್ನೆ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮಗಳು ಬಹಳ ಅದ್ದೂರಿಯಿಂದ ಸಮಾಜದ ಹಿರಿಯರ, ಗಣ್ಯರ ಮತ್ತು ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯಿಂದ ನೆರವೇರಿತು. ಕಾರ್ಕಳ ತಾಲ್ಲೂಕು ಯುವ ಬ್ರಾಹ್ಮಣ ಪರಿಷತ್ ಇದರ ಅಧ್ಯಕ್ಷರಾದಂತಹ ಶ್ರೀ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ , ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್ ಇರ್ವತ್ತೂರು, ಹಿರಿಯರಾದ ಶ್ರೀ ಜನಾರ್ಧನ ರಾವ್ ಇಡ್ಯ, ಎನ್ ಪಿ ಗ್ರೂಪ್ಸ್ ನ ಮಾಲೀಕರಾದಂತಹ ಶ್ರೀ ವಾಸುದೇವ ಭಟ್ ನೆಕ್ಕರಪಲ್ಕೆ , ಕಲ್ಲಮಠ ಶ್ರೀ ಸುರೇಶ್ ಉಪಾಧ್ಯಾಯ ಹಾಗೂ ಬಹುಮಾನದ ಪ್ರಾಯೋಜಕರಾದಂತಹ ಶ್ರೀ ಶ್ರೀಪತಿ ಬಾಯರ್ ಆಭರಣ ಜ್ಯುವೆಲ್ಲರ್ಸ್ ಕಾರ್ಕಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನೇಕ ಪುಟಾಣಿ ಮುದ್ದು ಮಕ್ಕಳು ಮುದ್ದು ಕೃಷ್ಣ ಹಾಗೂ ಮುದ್ದು ರಾಧೆಯ ವೇಷ ಹಾಕಿ ರಂಜಿಸಿದರು. ತದನಂತರ ನಡೆದ ಭಕ್ತಿ ಗೀತೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲೂ ಕೂಡ ಅನೇಕ ಮಕ್ಕಳು ಮತ್ತು ಹಿರಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಕೃಷ್ಣವೇಷ ಸ್ಪರ್ಧೆ ಹಾಗೂ ಭಕ್ತಿ ಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ವೈ. ಅನಂತಪದ್ಮನಾಭ ಭಟ್, ಶ್ರೀಮತಿ ಸವಿತಾ ನಾಗರಾಜ್ ಭಟ್, ಶ್ರೀಮತಿ ಶ್ಯಾಮಲಾ ಕೆ.ಭಟ್ ಹಾಗೂ ಶ್ರೀಮತಿ ಪವಿತ್ರಾ ಕೃಷ್ಣಪ್ರಸಾದ್ ಭಟ್ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಈ ಬಾರಿ ನಡೆದ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95 ಶೇಕಡಾಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ತದನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ರಜತ ನಾಣ್ಯ ಹಾಗೂ ನಗದು ರೂಪದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರಾದ ಶ್ರೀ ಕೃಷ್ಣಮೂರ್ತಿ ಭಟ್, ಶ್ರೀಮತಿ ಗಾಯತ್ರಿ ಕೃಷ್ಣಮೂರ್ತಿ ಭಟ್,ಡಾ. ಶ್ರೀರಾಮ ಮುಗೆರಾಯ, ಡಾ . ಮಾನಸ ಮುಗೆರಾಯ, ಶ್ರೀಮತಿ ಪಾವನ ರಾಮಚಂದ್ರ ಭಟ್, ಶ್ರೀಮತಿ ಪ್ರಫುಲ್ಲ ಕೃಷ್ಣ ಭಟ್, ಶ್ರೀಮತಿ ಮಾನಸ ಉಪಾಧ್ಯಾಯ, ಶ್ರೀ ಸಂದೀಪ ಕೇಕುಣ್ಣಾಯ ಹಾಗೂ ಶ್ರೀ ಮಂಜುನಾಥ ಉಪಾಧ್ಯಾಯ ಮುಂತಾದವರು ಸಹಕರಿಸಿದರು. ಹಾಗೂ ಸಮಾಜದ ಅನೇಕ ಹಿರಿಯ ಮತ್ತು ಕಿರಿಯ ಬಾಂಧವರೆಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು. ಶ್ರೀಮತಿ ಶಾರ್ವರಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ತಿನ ಕಾರ್ಯದರ್ಶಿ ಶ್ರೀ ರಮೇಶ್ ರಾವ್ ಬಿ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ನೆರೆದ ಎಲ್ಲಾ ವಿಪ್ರ ಬಾಂಧವರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಉಡುಪಿ ತಾಲೂಕು : ಮಹಿಳಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹಿರಿಯಡಕ ವಲಯ, ಕೊಡಿಬೆಟ್ಟು ಕುದಿ 82 ಕಾರ್ಯಕ್ಷೇತ್ರದ ಧರ್ಮ ದೇವತೆ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ವಿಷ್ಣುಮೂರ್ತಿ ಪ್ರೌಢಶಾಲೆ, ಕೊಡಿಬೆಟ್ಟು ಕುದಿ 82 ಇಲ್ಲಿ ನಡೆಯಿತು.

ನಿಟ್ಟೆ ಬ್ರಹ್ಮಾಕುಮಾರಿಸ್ ಬೃಂದಾವನ್ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಕಾರ್ಕಳದ ನಿಟ್ಟೆ ಬ್ರಹ್ಮಾಕುಮಾರಿಸ್ ಬೃಂದಾವನ್ ಧ್ಯಾನ ಕೇಂದ್ರದಲ್ಲಿ ಆಗಸ್ಟ್ 17ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಸಂಭ್ರಮಗಳಿಂದ ಆಚರಿಸಲಾಯಿತು.

ಏಷ್ಯಾ ಕಪ್‌ 2025: ಭಾರತ ತಂಡದಿಂದ ಗಿಲ್‌, ಸಿರಾಜ್‌, ಅಯ್ಯರ್‌ಗೆ ಕೊಕ್‌? ಆಯ್ಕೆ ಸಮಿತಿ ದಿಟ್ಟ ನಿರ್ಧಾರಕ್ಕೆ ಸಜ್ಜು

ಏಷ್ಯಾ ಕಪ್‌ 2025ರ ಭಾರತ ತಂಡದ ಆಯ್ಕೆ ಕುತೂಹಲ ಮೂಡಿಸಿದ್ದು, ಆಗಸ್ಟ್ 19ರಂದು ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಗೆಳೆಯರ ಬಳಗ ದಿಡಿಂಬಿರಿ ಇವರ ವತಿಯಿಂದ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬಜಗೋಳಿ ದಿಡಿಂಬಿರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ದಿನಾಂಕ 17/08/2025 ರಂದು ನಡೆಯಿತು.