
ಕಾರ್ಕಳ ಮಾರ್ಚ್.8 : ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ ಆರಕ್ಷಕರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಪೊಲೀಸ್ ಸಿಬ್ಬಂದಿಗಳಿಗೆ ಅಲ್ಲದೆ ಪೋಲಿಸ್ ನಿರೀಕ್ಷಣಾಧಿಕಾರಿ APS ಆಗಿರುವ ಹರ್ಷ ಪ್ರಿಯವದ IPS ಅವರಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ರಮಿತಾ ಶೈಲೇಂದ್ರ, ಮಮತಾ, ಸ್ವಾತಿ ಸಂತೋಷ್, ಹಾಗೂ ಪಲ್ಲವಿಯವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.